Site icon Kundapra.com ಕುಂದಾಪ್ರ ಡಾಟ್ ಕಾಂ

ಗೊಂಬೆಯಾಟ ಅಕಾಡೆಮಿ: ರಾಜಶೇಖರ್ ಹೆಬ್ಬಾರ್, ರಾಮದಾಸ್ ಆಚಾರ್ಯಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಮಾರ್ಚ್ ತಿಂಗಳ ಕಾರ್ಯಕ್ರಮದಲ್ಲಿ ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಹಂಗಾರಕಟ್ಟೆ ಕಲಾ ಕೇಂದ್ರದ ಕಾರ್ಯದರ್ಶಿಯಾದ ರಾಜಶೇಖರ್ ಹೆಬ್ಬಾರ್, ರಾಮದಾಸ್ ಆಚಾರ್ಯ, ಕೋಟೇಶ್ವರ ಅವರನ್ನು ಸನ್ಮಾಸಿದರು.

ತಿಂಗಳ ಗೊಂಬೆ ಮನೆ ಅತಿಥಿಯಾಗಿ ಉದ್ಯಮಿ ಪ್ರಶಾಂತ್ ತೋಳಾರ್, ಕುಂದಾಪುರ ಉಪಸ್ಥಿತರಿದ್ದರು. ಅತಿಥಿಗಳಾಗಿ ವೈಕುಂಠ ಹೆಬ್ಬಾರ್, ವಾಮನ್ ಪೈ ಭಾಗವಹಿಸಿದ್ದರು. ಅನಂತರ ಹಂಗಾರಕಟ್ಟೆ ಕಲಾಕೇಂದ್ರದವರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರೂಪಿಸಿದ್ದರು. ಉದಯ ಭಂಡಾರ್‌ಕಾರ್ ಹಾಗೂ ಮಂಜುನಾಥ ಮೈಪಾಡಿ ಸಹಕರಿಸಿದರು.

Exit mobile version