Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಉಚಿತ ಹಿಜಮಾ ಯುನಾನಿ ಚಿಕಿತ್ಸಾ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ಮಂಗಳೂರಿನ ಅಲ್ಪೈನ್ ಅಸೋಸಿಯೇಟ್ಸ್ ಸಹಯೋಗದಲ್ಲಿ ಬಾರಿಗೆ ಉಚಿತ ಹಿಜಮಾ ಯುನಾನಿ ಚಿಕಿತ್ಸಾ ಶಿಬಿರ ಸರಕಾರೀ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ್ರ ರಾಜು ದೇವಾಡಿಗ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುಜಾಹಿದ್ ನಖುದಾ, ಗಂಗೊಳ್ಳಿ ಜಾಮಿಯ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಹಮೀದ್, ಮುಬಾರಕ್ ಕ್ರಿಕೆಟ್ ಕ್ಲಬ್‌ನ ಸದಸ್ಯ ನೂರ್ ಅಮಿನ್ ಹಾಗೂ ಅಲ್ಪೈನ್ ಅಸೋಸಿಯೇಟ್ಸ್ ಮಂಗಳೂರಿನ ಸ್ಥಾಪಕ ಝಹೀರ್ ಅಹಮೆದ್ ನಾಖುದ ಉಪಸ್ಥಿತರಿದ್ದರು. ಸುಮಾರು 80 ಪುರುಷರು ಹಾಗೂ 50 ಮಹಿಳೆಯರು ಹಿಜಾಮಾ ಚಿಕಿತ್ಸೆಯ ಸದುಪಯೋಗವನ್ನು ಪಡೆದುಕೊಂಡಿದ್ದಾರೆ.

ಶಿಬಿರದಲ್ಲಿ ಮಂಗಳೂರಿನ ಡಾ. ಸಯೇದ್ ಝಾಹಿದ್ ಹುಸ್ಸೈನ್, ಉಡುಪಿಯ ಡಾ. ರುಕ್ಸರ್ ಅಂಜುಮ್ ಅವರಿಂದ ಉಚಿತ ಹಿಜಾಮಾ, ಯುನಾನಿ ಚಿಕಿತ್ಸೆ, ಸಲಹೆಯನ್ನು ನೀಡಲಾಯಿತು. ನವದೆಹೆಲಿಯ ರೆಕ್ಸ್ ರೆಮೆದಿಎಸ್ ಪ್ರೈವೇಟ್ ಲಿಮಿಟೆಡ್, ಉಡುಪಿಯ ಗ್ರೀನ್ ರೆಮೆದಿಎಸ್, ಮಂಗಳೂರಿನ ಅಲ್ಪೈನ್ ಅಸೋಸಿಯೇಟ್ಸ್ ವತಿಯಿಂದ ಆಯುರ್ವೇದ ಹಾಗೂ ಯುನಾನಿ ಔಷಧಗಳನ್ನು ಚಿಕಿತ್ಸೆಗೆ ಹಾಜರಾದವರಿಗೆ ಉಚಿತವಾಗಿ ನೀಡಲಾಯಿತು.

Exit mobile version