Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು: ಬ್ಯಾಂಕ್ ಪರೀಕ್ಷಾ ಮಾಹಿತಿ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ತೀವ್ರ ಪೈಪೋಟಿಯಿರುವಂತಹ ಪ್ರಸ್ತುತ ದಿನಗಳಲ್ಲೂ ಸಹ, ಸರಿಯಾದ ಪೂರ್ವ ಸಿದ್ಧತೆಗಳೊಡನೆ ನಾವು ಐಬಿಪಿಎಸ್ ಪರೀಕ್ಷೆಯನ್ನು ಬರೆದದ್ದೇ ಆದಲ್ಲಿ ಬ್ಯಾಂಕ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯ ಎಂದು ಮಂಗಳೂರಿನ ಬೆಸೆಂಟ್ ಮ್ಯಾನೇಜ್‌ಮೆಂಟ್ ಕಾಲೇಜಿನ ಕಾಯರ‍್ಕಟ್ಟೆಯ ಡಾ. ನಾರಾಯಣ ಹೇಳಿದರು.

ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ನಡೆದ ಬ್ಯಾಂಕ್ ಪರೀಕ್ಷೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.

ಪ್ರಾಧ್ಯಾಪಕ ರವೀಶ್ ಮಾತನಾಡಿ ಸರಳ ರೀತಿಯಲ್ಲಿ ಸುಲಭ ಮಾರ್ಗದಲ್ಲಿ ವಿದ್ಯಾರ್ಥಿಗಳು ಗಣಿತ ಮತ್ತಿತರ ರೀಸನಿಂಗ್ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಲಿತದ್ದೇ ಆದಲ್ಲಿ ಸಮಯದ ಉಳಿತಾಯದೊಡನೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯ ಎಂದರು.

ಕಾರ್ಯಾಗಾರವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉಮೇಶ್ ಮಯ್ಯ ಸಂಯೋಜಿಸಿದರು. ಪ್ರಾಂಶುಪಾಲ ಪ್ರೊ.ಬಿ.ಎ ಮೇಳಿ ಉಪಸ್ಥಿತರಿದ್ದರು. ಕುಮಾರಿ ಪೂರ್ಣಿಮಾ ಎನ್.ಆರ್ ವಂದಿಸಿದರು.

Exit mobile version