Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಸೇರಿದಂತೆ ಜಿಲ್ಲೆಯ ಈರ್ವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಘೋಷಣೆಯಾಗಿದ್ದು ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹಾಗೂ ಉಡುಪಿ ನಿಸ್ತಂತು ನಿರೀಕ್ಷಕ ಎಸ್.ಸಿ. ಮೋಹನ್ ಅವರಿಗೆ ಈ ಭಾರಿಯ ಪದಕ ಲಭಿಸಿದೆ.

ಸೇವಾ ಬದ್ಧತೆ ಹಾಗೂ ಅರ್ಹತೆಯನ್ನು ಆಧರಿಸಿ ಜಿಲ್ಲೆಯಿಂದ ಈರ್ವರ ಹೆಸರು ಶಿಪಾರಸ್ಸು ಮಾಡಲಾಗಿದ್ದು, ಏ.2ರಂದು ನಡೆಯಲಿರುವ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪದಕ ಸ್ವೀಕರಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸುಬ್ರಹ್ಮಣ್ಯ ಠಾಣೆಯ ಎಸೈ ಆಗಿ ನೇಮಕಗೊಂಡ ಮಂಜುನಾಥ ಶೆಟ್ಟಿ ಅವರು, ಉಪ್ಪಿನಂಗಡಿ, ಬೆಳ್ತಂಗಡಿ, ಬೆಂಗಳೂರು, ಉಡುಪಿ ಮಂಗಳೂರುನಲ್ಲಿ ಸೇವೆ ಸಲ್ಲಿಸಿ, ವೃತ್ತನಿರೀಕ್ಷಕರಾಗಿ ಭಡ್ತಿ ಪಡೆದು ಮುಂದೆ ಡಿವೈಎಸ್ಪಿ ಆಗಿ ಭಡ್ತಿ ಪಡೆದಿದ್ದರು.

Exit mobile version