Kundapra.com ಕುಂದಾಪ್ರ ಡಾಟ್ ಕಾಂ

ಕುವೈಟ್ ಜಿಎಸ್‌ಬಿ ಸಭಾ ಕೊಂಕಣಿ ಉತ್ಸವದಲ್ಲಿ ’ಬಾಯ್ಲ ಬ್ಹಾಡೆ ಬಾಯ್ಲ’ ನಾಟಕ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹೊರದೇಶದಲ್ಲಿದ್ದರೂ ತಾಯ್ನೆಲದ ಸಂಸ್ಕೃತಿ ಪರಂಪರೆ ಭಾಷೆ ಉಳಿಸಿ ಬೆಳೆಸುವ ಉದ್ದೇಶದಿಂದ ಕುವೈಟ್ ರಾಷ್ಟ್ರದಲ್ಲಿನ ಜಿಎಸ್‌ಬಿ ಸಭಾದವರು ವರ್ಷಂಪ್ರತಿ ಆಚರಿಸುವ ಕೊಂಕಣಿ ಸಾಂಸ್ಕೃತಿಕ ಉತ್ಸವದಲ್ಲಿ ಈ ಬಾರಿ ವಿಶೇಷವಾಗಿ ಸಾಹಿತಿ ಓಂ ಗಣೇಶ್ ಭಾಷಾಂತರಿಸಿದ ’ಬಾಯ್ಲ ಬ್ಹಾಡೆ ಬಾಯ’ ಕೊಂಕಣಿ ಹಾಸ್ಯ ನಾಟಕ ಪ್ರದರ್ಶಿಸಲಿದ್ದಾರೆ.

ಅಲ್ಲೇ ನೆಲೆನಿಂತ ಸಮಾಜ ಭಾಂದವರು ಮೇಳೈಸಿ ಪ್ರದರ್ಶಿಸುವ ಈ ಅಕಾಡೆಮಿ ಪುರಸ್ಕೃತ ಕೊಂಕಣಿ ಪ್ರಯೋಗದ ರಂಗ ತಾಲೀಮು ಈಗಾಗಲೆ ಆರಂಭಗೊಂಡಿದ್ದು ಡಾ. ಸುರೇಂದ್ರ ನಾಯಕ್ ಕಪಾಡಿ ಹಾಗೂ ನವೀನ್ ಪ್ರಭು ಜಂಟಿಯಾಗಿ ನಟಿಸಿ ನಿರ್ದೇಶಿಸುತ್ತಿದ್ದಾರೆ. ಸ್ಪೂರ್ತಿ ಶೆಣೈ, ವಿಶ್ವನಾಥ್ ಪ್ರಭು, ಅಂಜಲಿ ಪ್ರಭು, ಶ್ರೀನಿವಾಸ ಪ್ರಭು, ಶಶೀಧರ ಪ್ರಭು, ದಿನೇಶ್ ಪೈ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಕೃತಿಕಾರ ನಟ ಓಂಗಣೇಶ್ ಸಹ ಗೌರವ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಏ. 15ರ ಸಂಜೆ ನಾಲ್ಕರಿಂದ ಅಲ್ಲಿನ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ಆರಂಭಗೊಳ್ಳುವ ಈ ಪ್ರತಿಭಾ ಸಂಜೆಯಲ್ಲಿ ಸದಸ್ಯ ಮಹಿಳೆಯರ ಕಿರು ಪ್ರಹಸನ, ಚಿಣ್ಣರ ನೃತ್ಯಾವಳಿಯಲ್ಲದೆ ಮೈಸೂರು ಉಪ್ಪುಂದ ರಾಜೇಶ್ ಪಡಿಯಾರ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸದಸ್ಯರಿಗಾಗಿ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆ ಏರ್ಪಡಿಸಲಿದ್ದು ಸಭೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಎಲ್ಲಾ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಕಾರದಿಂದ ವಿದೇಶದಲ್ಲಿ ಹೀಗೊಂದು ವಿಶೇಷ ಕೊಂಕಣಿ ಉತ್ಸವ ಹಮ್ಮಿ ಕೊಳ್ಳಲಾಗಿದೆ ಎಂದು ಕುವೈಟ್ ಜಿಎಸ್‌ಬಿ ಸಭಾದ ನೂತನ ಅಧ್ಯಕ್ಷ ಗೋಕುಲ್‌ದಾಸ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version