Site icon Kundapra.com ಕುಂದಾಪ್ರ ಡಾಟ್ ಕಾಂ

ಹೇರಂಜಾಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದಿಂದ ಸದಾನಂದ ಸೇರ್ವೇಗಾರ್‌ಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ದಿ. ಕೆ. ಶ್ರೀನಿವಾಸ ರಾವ್ ಮತ್ತು ಪದ್ಮಾವತಿ ಎಸ್. ರಾವ್ ಹೇರಂಜಾಲು ಇವರ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನ ಹಾಗೂ ರಾಮಕ್ಷತ್ರಿಯ ಸಮಾಜ ಕುಂದಾಪುರ, ಬೈಂದೂರು ಇದರ ಆಶ್ರಯದಲ್ಲಿ ಹೇರಂಜಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸದಾನಂದ ಸೇರ್ವೇಗಾರ್ ಅವರನ್ನು ಸನ್ಮಾನಿಸಲಾಯಿತು.

ಹೆರಂಜಾಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ. ಪದ್ಮನಾಭ ರಾವ್, ಸುಶೀಲ ಪಾಂಡುರಂಗ ನಾಯಕ್, ವಿಷ್ಣುಮೂರ್ತಿ ಕುಂದಾಪುರ, ರಶ್ಮಿರಾಜ್ ಕುಂದಾಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version