Kundapra.com ಕುಂದಾಪ್ರ ಡಾಟ್ ಕಾಂ

ಫಿಟ್‌ನೆಸ್ ಹಾಗೂ ಮಾನಸಿಕ ದೃಢತೆಗಾಗಿ 111ಕಿ.ಮೀ ಸೈಕಲ್ ತುಳಿದ ಎಸ್ಪಿ ಅಣ್ಣಾಮಲೈ ತಂಡ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಸೈಕ್ಲಿಂಗ್ ಕ್ಲಬ್ ವತಿಯಿಂದ ಜಿಲ್ಲೆಯ ಶಿರೂರಿನಿಂದ ಹೆಜಮಾಡಿವರೆಗೆ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಮಲೈ ನೇತೃತ್ವದಲ್ಲಿ ಸೈಕ್ಲಿಂಗ್ ರಾಲಿ ನಡೆಯಿತು.

ಸೈಕ್ಲಿಂಗ್ ಪೂರ್ಣಗೊಳಿಸಿದ ಬಳಿಕ ಎಸ್ಪಿ ಕೆ. ಅಣ್ಣಾಮಲೈ ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಮಾತನಾಡಿ, ಫಿಟ್‌ನೆಸ್ ಮತ್ತು ಮಾನಸಿಕ ಸಾಮರ್ಥ್ಯ ವ್ರದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಇನ್ನು ಮುಂದೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ ಸೈಕ್ಲಿಂಗ್ ನಡೆಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸೈಕ್ಲಿಂಗ್ ಕ್ಲಬ್ ಉಡುಪಿ ವತಿಯಿಂದ ನಡೆದ ರಾಲಿಗೆ ಅದಾನಿ ಯುಪಿಸಿಎಲ್, ಕುಂದಾಪುರ ಪಾರಿಜಾತ ಹೋಟೆಲ್, ಉಡುಪಿಯ ಜಂಕ್ಷನ್ ಬೇಕರಿ ಹಾಗೂ ಸೇಂಟ್ ಆಂಥೊನಿ ಸೈಕಲ್ ಕಂಪೆನಿ ಪ್ರಾಯೋಜಕತ್ವ ವಹಿಸಿದ್ದವು. ಕುಂದಾಪ್ರ ಡಾಟ್ ಕಾಂ ಸುದ್ದಿ

ಉಡುಪಿ ಸೈಕ್ಲಿಂಗ್ ಕ್ಲಬ್, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು ೨೮ ಜನ ರಾಲಿಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು. ಈಜುಪಟು ಉಡುಪಿಯ ರೋನನ್ ಅವರು ಉಡುಪಿಯಿಂದ ಹೆಜಮಾಡಿವರೆಗೆ ರಾಲಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಡಿವೈಎಸ್ಪಿ ಕುಮಾರಸ್ವಾಮಿ, ಕಾಪು ವೃತ್ತ ನಿರೀಕ್ಷಕ ಸುನಿಲ್ ನಾಯಕ್, ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಭಾಗವಹಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

SP Annamalai leads cycle rally to promote healthy lifestyle

Exit mobile version