Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ, ವಿವಿ ಸ್ವರ್ಧೆಯಲ್ಲಿ ಪ್ರಥಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ’ಶಿಖರ’, ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ 2014-15ನೇ ಸಾಲಿನ ಅಂತರ್‌ಕಾಲೇಜು ವಾರ್ಷಿಕ ಸಂಚಿಕೆ ಸ್ವರ್ಧೆಯ ವರ್ಗ-1ರಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಗ್ರಾಮೀಣ ಸೊಗಡು, ವಿಶಿಷ್ಟ ಸಮುದಾಯಗಳ ಪರಿಚಯ, ಬಹುಭಾಷಾ ವೈವಿಧ್ಯ, ಕಥೆ, ಕವನ ಸೇರಿದಂತೆ ಹತ್ತಾರು ವಿಭಾಗಗಳನ್ನೊಳಗೊಂಡ ೫೦೦ ಪುಟಗಳ ಸಂಚಿಕೆ ಶಿಖರ ಅಂದದ ಮುಖಪುಟದೊಂದಿಗೆ ಮೂಡಿಬಂದಿತ್ತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೋಮ ವಾರ್ಷಿಕ ಸಂಚಿಕೆಯ ಗೌರವ ಸಂಪಾದಕರಾಗಿದ್ದರೇ, ಕನ್ನಡ ವಿಭಾಗದ ಮುಖ್ಯಸ್ಥ ಚೇತನ್ ಶೆಟ್ಟಿ ಕೋವಾಡಿ ನಿರ್ವಾಹಕ ಸಂಪಾದಕರಾಗಿದ್ದಾರೆ. ಕಳೆದ ಸಾಲಿನಲ್ಲಿ ನಿರ್ಗಮಿಸಿ ಪ್ರಾಂಶುಪಾಲೆ ಸೀಮಾ ಶೆಟ್ಟಿ ಸಂಚಿಕೆಯ ಗೌರವ ಸಂಪಾಕದರಾಗಿದ್ದಾಗ ’ಶಿಖರ’ ದ್ವಿತೀಯ ಸ್ಥಾನ ಪಡೆದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಾರ್ಷಿಕ ಸಂಚಿಕೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣೀಕರ್ತರಾದ ಸಂಪಾದಕೀಯ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ.

Dr BB Hegde College Magazine_Shikhara2

Exit mobile version