Kundapra.com ಕುಂದಾಪ್ರ ಡಾಟ್ ಕಾಂ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮೈಸೂರು ವಿಭಾಗೀಯ ಮಹಾ ಸಮ್ಮೇಳನ

Ku

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ನೀಡುವ ಜವಾಬ್ದಾರಿ ಸರಕಾರದ ಮೇಲಿದ್ದರೇ, ಸರಕಾರಿ ಆಡಳಿತ ವ್ಯವಸ್ಥೆಯನ್ನು ಶ್ರೀಸಾಮಾನ್ಯರಿಗೂ ತಲುಪಿಸುವ ಜವಾಬ್ದಾರಿ ಸರಕಾರಿ ನೌಕರರದ್ದು ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

ಕುಂದಾಪುರ ಗಾಂಧಿ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮೈಸೂರು ವಿಭಾಗೀಯ ಮಹಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯ ಬರಗಾಲ ಮುಂತಾದ ಸಂಕಷ್ಟ ಎದುರಿಸುತ್ತಿದ್ದರೂ, ರಾಜ್ಯ ಸರಕಾರಿ ನೌಕರರ ಖಾಲಿ ಹುದ್ದೆ ಭರ್ತಿ ಮಾಡುವ ಜೊತೆಗೆ ವೇತನ ತಾರತಮ್ಯ ಹೋಗಲಾಡಿಸಿ ಕೇಂದ್ರದ ೭ನೇ ಹಣಕಾಸು ಆಯೋಗದ ವೇತನ ರಾಜ್ಯ ಸರಕಾರಿ ನೌಕರರಿಗೆ ನೀಡುವಂತೆ ಮುಖ್ಯಮಂತ್ರಿ ಅವರ ಮನ ಒಲಿಸಲಾಗುತ್ತದೆ ಎಂಬ ಭರವಸೆ ನೀಡಿದರು.

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವುದು ತಪ್ಪಲ್ಲ. ಆರ್ಥಿಕ ಶಕ್ತಿ ಸಿಕ್ಕರೆ ಬದುಕಿಗೆ ಸ್ಥಿರತೆ ಸಿಕ್ಕುತ್ತದೆ. ಎಲ್ಲರಿಗೂ ಉದ್ಯೋಗ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಯಿತು. ಸರಕಾರ ಆಡಳಿತ ಸುಧಾರಣಾ ಯೋಜನೆ ಜನ ಸಾಮನ್ಯರಿಗೆ ಮುಟ್ಟಿಸುವ ಕೆಲಸ ಮಾಡುವ ನೌಕರರ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುತ್ತದೆ ಎಂಬ ಭರವಸೆ ನೀಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕರ್ನಾಟಕ ರಾಜ್ಯ ನೌಕರರ ಸಂಘ ರಾಜ್ಯಾಧ್ಯಕ್ಷ ಮಂಜೇಗೌಡ ಅಧ್ಯಕ್ಷತೆ ವಹಿಸಿದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮೂಡುಬಿದ್ರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಂಚಾಲಕ ಡಾ. ಮೋಹನ ಆಳ್ವ, ಕ.ರಾ.ಸರಕಾರಿ ಸೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಉದ್ಯಮಿಗಳಾದ ಎಂ. ಎಂ. ಇಬ್ರಾಹಿಂ, ರತ್ನಾಕರ ಶೆಟ್ಟಿ, ಚಿಕ್ಕಮಗಳೂರು ನ್ಯಾಯವಾದಿ ಭೋಜೇಗೌಡ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು, ಖಜಾಂಚಿ ಯೋಗಾನಂದ್, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಮಡಿಕೇರಿ ಜಿಲ್ಲಾಧಕ್ಷ ಕೆ.ಬಿ. ರವಿ., ವಿಭಾಗ ಮಟ್ಟದ ಉಪಾಧಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ನೌಕರರ ಸಂಘ ಗೌರವಾಧಕ್ಷ ಎಚ್.ಕೆ. ರಾಮು, ಮೈಸೂರು ವಿಭಾಗೀಯ ಉಪಾಧ್ಯಕ್ಷ ದ್ವಿತಿಯಾ, ಅರುಣ್ ಮಾ. ಲೋಕರೆ, ಪುಟ್ಟ ಸ್ವಾಮಿ ಗೌಡ, ರಾಜ್ಯ ಸಂಘ ಪದಾಧಿಕಾರಿ ಮರಿ ಗೌಡ, ಚಂದ್ರಶೇಖರ್, ಬಿ.ಕೆ. ಹರೀಶ್,ತಾಲೂಕ್ ಅಧ್ಯಕ್ಷ ದಿನಕರ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗೋವಾ ಕ್ವಾಲಿಟಿ ಎಕ್ಸ್‌ಪೋರ್ಟ್ ನಿರ್ದೇಶಕ ಎಂ.ಎಂ.ಇಬ್ರಾಹಿಂ, ಮುಂಬೈ ರತ್ನಾ ಪ್ಯಾಲೇಸ್ ರತ್ನಾಕರ ಜಿ.ಶೆಟ್ಟಿ, ದುಬೈ ಆಲ್ ಅಹಲಿ ಫಾರ್ಮಸಿ ಅಬ್ದುಲ್ ಮುನಾಫ್ ಮಾವಿನಕಟ್ಟೆ, ಕುಂದಾಪುರ ಡಿಎಸ್ಪಿ ಎಂ. ಮಂಜುನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸುಮನಾ ಮತ್ತು ಬಳಗ ಪ್ರಾರ್ಥಿಸಿದರು. ಸರಕಾರಿ ನೌಕರ ಸಂಘ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಸ್ವಾಗತಿಸಿದರು. ಸಂಘಟನಾ ಕಾರ‍್ಯದರ್ಶಿ ದಿವಾಕರ ಎನ್.ಖಾರ್ವಿ, ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕರಾದ ವೇಣುಗೋಪಾಲ ಹೆಗ್ಡೆ ವಕ್ವಾಡಿ, ಪ್ರಶಾಂತ ಶೆಟ್ಟಿ ಹಾವಂಜೆ, ಗಣಪತಿ ಹೋಬಳಿದಾರ್ ಬೈಂದೂರು ನಿರೂಪಿಸಿದರು. ಕಾರ‍್ಯದರ್ಶಿ ಚಂದ್ರಕಾಂತ್ ಬಿ., ವಂದಿಸಿದರು.

Karnataka State Govt Employees Mysore devision Sammelana (2)

Exit mobile version