Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳ ಚಿನ್ನ ಕಳವು ಪ್ರಕರಣ: ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಚಿನ್ನ ಕಳವು ಪ್ರಕರಣದಲ್ಲಿ ಕೊಲ್ಲೂರು ದೇವಸ್ಥಾನ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಎಲ್.ಎಸ್. ಮಾರುತಿಯನ್ನು (61) ಬಂಧಿಸಲಾಗಿದೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಕೆ. ತಿಳಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕರ್ತವ್ಯ ಲೋಪ, ಘಟನೆಯಲ್ಲಿ ಪರೋಕ್ಷ ಶಾಮೀಲು ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು 409 ಐಪಿಸಿ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿದೆ ಎಂದರು. ಎಲ್.ಎಸ್ ಮಾರುತಿ ಅವರನ್ನು ಸಂಜೆ ಕುಂದಾಪುರ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರು ಪಡಿಸಲಾಗಿದ್ದು, ಹಿರಿಯಡ್ಕ ಜೈಲಿಗೆ ರವಾನಿಸಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಘಟನೆಯಲ್ಲಿ ಈಗಾಗಲೇ ಪ್ರಮುಖ ಆರೋಪಿ ಶಿವರಾಮ್ ಮಡಿವಾಳ, ಗಂಗಾಧರ ಹೆಗ್ಡೆ, ಪ್ರಸಾದ್ ಕುಮಾರ್, ನಾಗರಾಜ ಶೇರಿಗಾರ್ ಮತ್ತು ಗಣೇಶ್ ಪೂಜಾರಿ ಎಂಬವರನ್ನು ಬಂಧಿಸಿದ್ದು, ಶಿವರಾಮ ಮಡಿವಾಳ ಹೊರತು ಪಡಿಸಿ ಉಳಿದವರು ಬೇಲ್ ಮೇಲೆ ಹೊರಗೆ ಬಂದಿದ್ದಾರೆ ಎಂದು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಎಲ್.ಎಸ್.ಮಾರುತಿ 2012 ರಿಂದ 2015ರ ವರಗೆ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಇವರ ಕಾಲದಲ್ಲಿ ಚಿನ್ನ ದುರುಪಯೋಗವಾಗಿರುವ ಬಗ್ಗೆ ತನಿಕೆಯ ವೇಳೆ ಬೆಳಕಿಗೆ ಬಂದಿತ್ತು, ಕಳುವಾದ ಎಲ್ಲಾ ಚಿನ್ನಾಭರಣಗಳನ್ನು ಖಜಾನೆಗೆ ಪಡೆದುಕೊಂಡ ಬಗ್ಗೆ ರಶೀದಿ ನೀಡಿ, ಅದಕ್ಕೆ ಇವರು ಸಹಿ ಹಾಕಿದ್ದಾರೆ. ಆದರೆ ಖಜಾನೆಯಲ್ಲಿ ಚಿನ್ನವಿರಲಿಲ್ಲ. ಈ ಘಟನೆಯಲ್ಲಿ ಈಗಾಗಲೇ ಬಂಧಿತರಾದವರ ಮೇಲೆ ಈ ಅಧಿಕಾರಾವಧಿಯಲ್ಲಿಯೂ ಚಿನ್ನ ದುರುಪಯೋಗ ಆದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಕಾರ್ಯನಿರ್ವಹಣಾಧಿಕಾರಿಯಾಗಿ ಆಪಾದಿತ ಮೇಲೆ ಕ್ರಮ ತೆಗೆದುಕೊಳ್ಳದೆ ಮತ್ತೆ ಆಪಾದಿತರಿಗೆ ಅದೇ ಜವಾಬ್ದಾರಿ ನೀಡಿದ್ದು, ಕರ್ತವ್ಯ ಲೋಪವಾಗಿದೆ ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸುದ್ದಿಗೋಷ್ಟ್ಠಿಯಲ್ಲಿ ಡಿಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಕುಂದಾಪುರ ಪಿಎಸ್‌ಐ ನಾಸಿರ್ ಹುಸೇನ್ ಉಪಸ್ಥಿತರಿದ್ದರು.

Exit mobile version