Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಪದಲ್ಲಿ ಮಡದಿಯನ್ನು ಚೂರಿಯಿಂದ ಇರಿದ ಪತಿ. ಆಸ್ಪತ್ರೆಗೂ ಸೇರಿಸಿ ಪೊಲೀಸರಿಗೆ ಶರಣು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗಂಡ-ಹೆಂಡಿರ ಜಗಳ ತಾರಕಕ್ಕೇರಿ ಪ್ರೀತಿಸಿ ಮದುವೆಯಾದ ಮಡದಿಗೆ ಚೂರಿಯಿಂದ ಇರಿದುದ್ದಲ್ಲದೇ, ತಾನೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಬಳಿಕ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ ತಾಲೂಕಿನ ಬಿದ್ಕಲ್‌ಕಟ್ಟೆಯಲ್ಲಿ ನಡೆದಿದೆ.

ಮಡಿಕೇರಿ ಮೂಲದ, ರಿಕ್ಷಾ ಚಾಲಕ ಸುರೇಶ್ (33) ಚೂರಿಯಿಂದ ಇರಿದು ಬಂಧಿತನಾದ ಅಸಾಮಿ. ರೇಣುಕಾ (25) ಗಂಡನಿಂದ ಹಲ್ಲೆಗೊಳಗಾದಾಕೆ. ಪ್ರೀತಿಸಿ ಮದುವೆಯಾದ ದಂಪತಿಗಳಿಗೆ ಒಬ್ಬ ಮಗನಿದ್ದಾನೆ. ಬಿದ್ಕಲ್‌ಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿರುವ ಈ ಗಂಡ ಹೆಂಡಿರ ನಡುವೆ ಸಂಜೆಯ ವೇಳೆಗೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಸುರೇಶ್,  ತರಕಾರಿ ಹೆಚ್ಚುತ್ತಿದ್ದ ಚೂರಿಯಿಂದ ರೇಣುಕಾಳ ಕುತ್ತಿಗೆಗೆ ಇರಿದಿದ್ದಾನೆ. ಆಕೆಯ ಅರಚಾಟ ಕೇಳಿ ತನ್ನ ತಪ್ಪಿನ ಅರಿವಾಗಿ ಕೂಡಲೇ ಆಕೆಯನ್ನು ರಕ್ಷಿಸಲೂ ಮುಂದಾಗಿದ್ದಾನೆ. ಆದರೆ ಮತ್ತೆ ಇರಿಯುವನೆಂಬ ಭಯದಿಂದ ಓಡುತ್ತಿದ್ದ ಮಡದಿ ಹಿಡಿದುಕೊಳ್ಳುವ ಬರದಲ್ಲಿಆಕೆ ಹೊಟ್ಟೆಗೂ ಚೂರಿ ತಾಕಿ ಗಂಭೀರ ಗಾಯಗೊಂಡಿದ್ದಳು. ಕುಂದಾಪ್ರ ಡಾಟ್ ಕಾಂ ಸುದ್ದಿ

ಕೂಗಾಟ ಕೇಳಿ ಅಲ್ಲಿಗೆ ಬಂದ ನೆರಮನೆಯವರ ಸಹಾಯದೊಂದಿಗೆ ಪತ್ನಿಯನ್ನು ತನ್ನದೇ ರಿಕ್ಷಾದಲ್ಲಿ ಕೂರಿಸಿಕೊಂಡು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿಂದ ಸೀದಾ ಕುಂದಾಪುರದ ಠಾಣೆಗೆ ಬಂದು ಪೊಲೀಸರ ಬಳಿ ನಡೆದ ಘಟನೆಯನ್ನು ವಿವರಿಸಿ ಶರಣಾಗಿದ್ದಾನೆ. ಪ್ರಕರಣ ಕೋಟ ಠಾಣೆಯ ವ್ಯಾಪ್ತಿಗೆ ಬರುವುದರಿಂದ ಕೋಟ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಅವರ ವಶಕ್ಕೆ ನೀಡಲಾಯಿತು. ಅತ್ತ ಗಂಬೀರ ಗಾಯಗೊಂಡ ಪತ್ನಿಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ

ಹೆಂಡತಿಯ ಬದಲಾದ ನಡವಳಿಕೆ, ಅನ್ಯರೊಂದಿಗೆ ಅತಿಯಾದ ಮೊಬೈಲ್ ಸಂಭಾಷಣೆ ತನ್ನನ್ನು ಕೊಪಕ್ಕೀಡುಮಾಡಿತ್ತು. ತನ್ನ ಮಡದಿಗೆ ಎಷ್ಟು ಹೇಳಿದರೂ ಅರ್ಥವಾಗಿರಲಿಲ್ಲ. ಇದೇ ವಿಷಯದಲ್ಲಿ ಜಗಳವಾಗಿ ಕೋಪಗೊಂಡು ಕೆಲಸ ಮಾಡಿದ್ದೇನೆ. ಎಂದು ಬಂಧಿತ ಸುರೇಶ್ ಹೇಳಿಕೊಂಡಿದ್ದಾನೆ.

Exit mobile version