Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್ಕಾರ್ಸ್ ಕಾಲೇಜು: ಅಂತರ ತರಗತಿ ಪ್ರತಿಭಾ ಸ್ಫರ್ಧೆ ಬಹುಮಾನ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮೊದಲ ದಿನ ಅಂತರ ತರಗತಿ ಪ್ರತಿಭಾ ಸ್ಫರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಅಂತರ ತರಗತಿ ಪ್ರತಿಭಾ ಸ್ಫರ್ಧೆಯ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ್ಥಾನ ದ್ವಿತಿಯ ಬಿಕಾಂ, ದ್ವಿತೀಯ ಸ್ಥಾನವನ್ನು ಪ್ರಥಮ ಬಿಎಸ್.ಸಿ, ತೃತೀಯ ಸ್ಥಾನವನ್ನು ಬಿ.ಎ ವಿದ್ಯಾರ್ಥಿಗಳು ಪಡೆದುಕೊಂಡರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪ್ರಜ್ನೇಶ್ ಪ್ರಭು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ರೀಸರ್ಚ್ ಫಂಡ್‌ನಿಂದ ಸಂಶೋಧನೆ ಪ್ರಬಂಧ ಮಂಡಿಸಿದ ಮತ್ತು ಮಾರ್ಗದರ್ಶನ ಮಾಡಿದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಕಾಲೇಜಿನ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಘಟಕದಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅಂತರ್ ಕಾಲೇಜು ಸ್ಫರ್ಧೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಅರುಣಾಚಲ ಮಯ್ಯ, ಉಪಸ್ಥಿತರಿದ್ದರು. ಸಂಖಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ತಂತ್ರಿ, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಯಶವಂತಿ ಕೆ, ಉಪನ್ಯಾಸಕಿಯರಾದ ಶಿಲ್ಪಾ ಜೆ., ರಮ್ಯಾ ಬಹುಮಾನಿತರ ವಿವರವನ್ನು ವಾಚಿಸಿದರು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.

Bck college day inter class competition (3).PNG

Exit mobile version