Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮಲ್ಯಾಡಿ ದೈವಸ್ಥಾನದಲ್ಲಿ ಕಳವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಮಲ್ಯಾಡಿ ಶ್ರೀ ಮಹಾದೇವಿ ನಂದಿಕೇಶ್ವರ ಸಹಪರಿವಾರ ದೈವಸ್ಥಾನದಲ್ಲಿ ಭಾನುವಾರ ರಾತ್ರಿ ದೈವಸ್ಥಾನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಪ್ರಭಾವಳಿ ಕದ್ದೊಯ್ದ ಘಟನೆ ವರದಿಯಾಗಿದೆ.

ಕಾಣಿಕೆ ಡಬ್ಬ ದೈವಸ್ಥಾನದಿಂದ ಹೊರತಂದು ಒಡೆಯುವ ಪ್ರಯತ್ನದಲ್ಲಿ ವಿಫಲರಾದ ಕಳ್ಳರು, ದೇವಸ್ಥಾನದ ಹೊರ ಬಯಲಿಲ್ಲಿ ಬಿಟ್ಟು ಪರಾರಿಯಾಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ ೧ ಲಕ್ಷ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕುಂದಾಪುರ ಡಿಎಸ್ಪಿ ಎಂ.ಮಂಜುನಾಥ ಶೆಟ್ಟಿ, ಕೋಟ ಪಿಎಸೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Exit mobile version