Kundapra.com ಕುಂದಾಪ್ರ ಡಾಟ್ ಕಾಂ

ಪತ್ರಕರ್ತ ಜಾನ್ ಡಿಸೋಜಾ, ನ್ಯಾಯುವಾದಿ ರವಿಕಿರಣ್ ಮುರುಡೇಶ್ವರ್‌ಗೆ ಅಂಬೇಡ್ಕರ್ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಅಧಿಕಾರ, ಶಿಕ್ಷಣ, ಆರ್ಥಿಕ ಸಬಲೀಕರಣ, ರಾಜಕೀಯ ಸಮಾನತೆ ಡಾ. ಅಂಬೇಡ್ಕರ್ ಆಶಯವಾಗಿತ್ತು. ರಾಜಕೀಯ ಲಾಭಕ್ಕಾಗಿ ಜಾತಿಗಳ ಒಡೆಯಲಾಗಿದೆ. ಒಡೆದ ಜಾತಿಗಳು ಮತ್ತೆ ಒಂದಾಗಿ ಆರ್ಥಿಕ, ರಾಜಕೀಯ, ಶಿಕ್ಷಣ ಮತ್ತು ಸಮಾನತೆ ಸಾಧಿಸುವ ಮೂಲಕ ಅಂಬೇಡ್ಕರ್ ಆಶಯ ಪೂರೈಸಬೇಕಾಗಿದೆ ಎಂದು ಚಿಕ್ಕಮಗಳೂರು ಬಿಎಸ್‌ಪಿ ರಾಜ್ಯ ಕಾರ‍್ಯದರ್ಶಿ ವೆಲಾಯುಧನ್ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕುಂದಾಪುರ ತಾಪಂ. ಕಚೇರಿ ಎದುರು ನಡೆದ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ಭೀಮಜ್ಯೋತಿ ವಿವಿದೋದ್ಧೇಶ ಸಹಕಾರಿ ಸಂಘ ಉದ್ಘಾಟನೆ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.

ಉಡುಪಿ ಧರ್ಮಗುರು ರೆ.ಫಾ.ವಿಲಿಯಂ ಮಾರ್ಟೀಸ್ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾಪು ವಿದ್ಯಾನಿಕೇತನ ಉಪನ್ಯಾಸಕಿ ಜ್ಯೋತಿ ಗುರು ಪ್ರಸಾದ್ ಭೀಮಜ್ಯೋತಿ ಸಹಕಾರಿ ಸಂಘ ಉದ್ಘಾಟಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತಲ್ಲೂರು ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಪ್ರಶಾಂತ್ ತೊಟ್ಟಂ, ಜಿಲ್ಲಾ ಬೌದ್ಧ ಮಹಾಸಭಾ ಅಧ್ಯಕ್ಷ ಶಂಭು ಸುವರ್ಣ, ಪತ್ರಕರ್ತ ಚಂದ್ರಮಾ ತಲ್ಲೂರು, ಶೇಖರ್ ಪೆರ್ಡೂರು, ರಮೇಶ್ ಹರಿಖಂಡಿಗೆ ಇದ್ದರು.

ಇದೇ ಸಂದರ್ಭದಲ್ಲಿ ಹಿರಿಯ ವರದಿಗಾರ ಜಾನ್ ಡಿಸೋಜಾ ಕೋಣಿ, ಕುಂದಾಪುರ ನ್ಯಾಯುವಾದಿ ರವಿಕಿರಣ್ ಮುರುಡೇಶ್ವರ, ದಲಿತ ಪರ ಹೋರಾಟಗಾರ ಗೋವಿಂದ ಮಾರ್ಗೋಳಿ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಬಂದ ಜಿಪಂ. ಸದಸ್ಯೆ ಜ್ಯೋತಿ ಕಾವ್ರಾಡಿ, ಕುಂದಾಪುರ ಬಾಲಕರ ವಸತಿ ನಿಲಯ ಮೇಲ್ವಿಚಾರಕಿ ಲಕ್ಷ್ಮೀ ವಿ., ಕಾವ್ರಾಡಿ ತಾಪಂ. ಸದಸ್ಯೆ ಅಂಬಿಕಾ ಕಾವ್ರಾಡಿ, ತ್ರಾಸಿ ತಾಪಂ. ಸದಸ್ಯ ನಾರಾಯಣ ಗುಜ್ಜಾಡಿ, ತಲ್ಲೂರು ಗ್ರಾಪಂ. ಸದಸ್ಯೆ ದೇವಿ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಚಂದ್ರ ಸ್ವಾಗತಿಸಿದರು. ಜ್ಯೋತಿ ಪೆರ್ಡೂರು ಕ್ರಾಂತಿ ಗೀತೆ ಹಾಡಿದರು. ಮಾಸ್ಟರ್ ದಿನೇಶ್ ವಿ. ನಿರೂಪಿಸಿದರು. ಜಿಲ್ಲಾ ದಲಿತ ಸಭಾ ವಸಂತ್ ವಂಡ್ಸೆ ವಂದಿಸಿದರು.

Exit mobile version