Kundapra.com ಕುಂದಾಪ್ರ ಡಾಟ್ ಕಾಂ

ಕೊಡೇರಿಯಲ್ಲಿ ಅಪರಿಚಿತ ವ್ಯಕ್ತಿಯ ತುಂಡು ದೇಹ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿಗೆ ಸಮೀಪದ ಕೊಡೇರಿ ಕಡಲತೀರದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ದೇಹದ ಭಾಗವೊಂದು ಪತ್ತೆಯಾಗಿದ್ದು ಗುರುತು ಪತ್ತೆಗಾಗಿ ಬೈಂದೂರು ಶವಾಗಾರದಲ್ಲಿರಿಸಲಾಗಿದೆ.

ಕೊಡೇರಿಯ ಸಮುದ್ರ ತೀರದಲ್ಲಿ ವ್ಯಕ್ತಿಯ ದೇಹದ ಸೊಂಟದ ಕೆಳಗಿನ ೨ ಫೀಟ್ ಉದ್ದದ ಭಾಗವೊಂದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸರು ಪರಿಶೀಲನೆ ನಡೆಸಿ ಗಂಗೊಳ್ಳಿ ಎಂಎಚ್‌ಐ ಹೆಲ್ಪ್ ಲೈನ್ ಸ್ವಯಂಸೇವಕರಾದ ಇಬ್ರಾಹಿಂ ಹಾಗೂ ಆದಿಲ್ ಅವರ ನೆರವಿನಿಂದ ದೇಹದ ಭಾಗವನ್ನು ಬೈಂದೂರು ಶವಾಗಾರಕ್ಕೆ ರವಾನಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Koderi unknow person body piece found - Mohammad ibrahim gangolli helped police to carry (3)

Exit mobile version