Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಜಾಮ್: ಬಿಸಿಲ ಬೇಗೆಯಲ್ಲಿ ರಸ್ತೆ ಮಧ್ಯೆ ಸಿಲುಕಿ ಬಸವಳಿದ ಜನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದು ಎಲ್ಲೆಡೆ ಮದುವೆ ಸಮಾರಂಭ. ಸಹಜವಾಗಿ ವಾಹನ ದಟ್ಟಣೆಯೂ ಹೆಚ್ಚಿತ್ತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಕೂಡ ನಡೆಯುತ್ತಿದೆ. ಇಕ್ಕಟ್ಟಾದ ಹೆದ್ದಾರಿಯಲ್ಲಿ ಸಂಚಾರವೇ ಕಷ್ಟಸಾಧ್ಯ ಆಗಿರುವಾಗ ಬಸ್ರೂರು ಮೂರುಕೈ ಬಳಿ ಟ್ಯಾಂಕರೊಂದು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡದ್ದೇ ತಡ, ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಜಾಮ್ ಆಗತೊಡಗಿದವು.

ವಾಹನ ದಟ್ಟಣೆ ಹೆಚ್ಚಿದ್ದರಿಂದ ಬೆಳಿಗ್ಗೆ 11ಗಂಟೆಯ ಹೊತ್ತಿಗೆ ಜಾಮ್ ಆಗಿದ್ದು ಮಧ್ಯಾಹ್ನ 2:30ರ ತನಕ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟರು.  ಸುಮಾರು 2ಕಿ.ಮೀ ವರೆಗೆ ಕುಂದಾಪುರ ಹಾಗೂ ಹೊರವಲಯದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಮದುವೆ ಮುಂತಾದ ಶುಭಾ ಸಮಾರಂಭಗಳಿಗೆ ತೆರಳುತ್ತಿದ್ದ ನೂರಾರು ಜನರು ಉರಿಬಿಸಿಲಿನಲ್ಲಿ ರಸ್ತೆ ಮಧ್ಯೆಯೇ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದರು. 2:30ರ ತರುವಾಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಸಂಚಾಯ ಸುಗಮವಾಗಿದೆ.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಮಂದಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಬಸ್ರೂರು ಮೂರುಕೈಯಿಂದ ಕುಂದಾಪುರ ಶಾಸ್ತ್ರೀವೃತ್ತದ ವರೆಗೆ ಸಂಚರಿಸುವುದೇ ದುಸ್ತರವೆನಿಸಿದೆ. ಕುಂದಾಪುರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. / ಕುಂದಾಪ್ರ ಡಾಟ್ ಕಾಂ ಸುದ್ದಿ.

April 20, Kundapura Trafic Jam (1)

Exit mobile version