Kundapra.com ಕುಂದಾಪ್ರ ಡಾಟ್ ಕಾಂ

ಹಿಂದೂಗಳು ಜಾಗೃತರಾದರೇ ಮಾತ್ರ ಸವಾಲುಗಳಿಗೆ ಉತ್ತರ ನಿಡಲು ಸಾಧ್ಯ: ಚೈತ್ರಾ ಕುಂದಾಪುರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಭಾರತೀಯ ಸಂಸ್ಕೃತಿ, ಪರಂಪರೆಗೆ ವಿಶ್ವದಲ್ಲೇ ವಿಶಿಷ್ಟ ಸ್ಥಾನಮಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಮೈಮರೆತಿರುವುದರಿಂದ ಬಲಿಷ್ಠ ಹಿಂದು ಸಮಾಜದ ಮೇಲೆ ವ್ಯವಸ್ಥಿತ ರೀತಿಯಲ್ಲಿ ಷಡ್ಯಂತ್ರಗಳು ನಡೆಯುತ್ತಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ಮೊದಲಾದವುಗಳು ನಿರಂತರವಾಗಿ ನಮ್ಮ ಸಮಾಜದ ಬುಡಕ್ಕೆ ಕೈಹಾಕಿದೆ. ಸಮಸ್ತ ಹಿಂದುಗಳು ಜಾಗೃತರಾದರೆ ಮಾತ್ರ ಇಂತಹ ಸವಾಲುಗಳಿಗೆ ಉತ್ತರ ನೀಡಲು ಸಾಧ್ಯವಿದೆ. ಹಿಂದು ಸಮಾಜದ ಮೇಲೆ ಆಕ್ರಮಣಗಳು ನಡೆದಾಗ ಸಮಸ್ತ ಹಿಂದು ಸಮಾಜ ಜಾತಿ ಮತ ಬೇಧವಿಲ್ಲದೆ ಎಚ್ಚೆತ್ತುಕೊಳ್ಳಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಕೇಂದ್ರ ಕಾರ್ಯಕಾರಿಣಿ ಚೈತ್ರಾ ಕುಂದಾಪುರ ಹೇಳಿದರು.

ಅವರು ಪರಶುರಾಮ ಘಟಕ ಮಲ್ಯರಬೆಟ್ಟು ಗಂಗೊಳ್ಳಿ ಇವರ ಆಶ್ರಯದಲ್ಲಿ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಭಾರತ ಮಾತಾ ಪೂಜನ ಮತ್ತು ರಾಷ್ಟ್ರ ಚಿಂತನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಭಾರತ ಮಾತೆಯ ಸೇವೆಗೆ, ದೇಶದ ರಕ್ಷಣೆಗೆ ಸಿದ್ಧರಾಗಿರುವ ಯುವ ಜನರು ಪ್ರೋತ್ಸಾಹಿಸುವ ಕೆಲಸ ನಡೆಯಬೇಕು. ಇತ್ತೀಚಿನ ವರದಿಗಳ ಪ್ರಕಾರ ಕಾಸರಗೋಡು ಮತ್ತು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಸುಮಾರು ೩೨ ಸಾವಿರ ಮಂದಿ ಮಹಿಳೆಯರು ನಾಪತ್ತೆಯಾಗಿದ್ದು, ಈ ಮಹಿಳೆಯರನ್ನು ಯುವತಿಯರನ್ನು ಲವ್ ಜಿಹಾದ್ ಮತಾಂತರದ ಬಲೆಗೆ ಬೀಳಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಲವ್ ಜಿಹಾದ್, ಮತಾಂತರ ಮೊದಲಾದವುಗಳನ್ನು ತಡೆಯಲು ಮಹಿಳೆಯರು ಸನ್ನದ್ಧರಾಗಿರಬೇಕು. ನಾವು ನಮ್ಮತನವನ್ನು ಕಳೆದುಕೊಂಡಿರುವುದರಿಂದ ಮತ್ತು ತಾಯಂದಿರು ಹೆಣ್ಣುಮಕ್ಕಳಿಗೆ ಹೇಗೆ ಬದುಕಬೇಕು ಎಂಬುದನ್ನು ಹೇಳಿಕೊಡದೇ ಇರುವುದರಿಂದ ಇಂದು ಹೆಣ್ಣುಮಕ್ಕಳು ಕಂಡ ಕಂಡವರ ಪಾಲಾಗುತ್ತಿದ್ದಾರೆ. ನಮ್ಮತನವನ್ನು ನಾವು ಒಪ್ಪಿಕೊಂಡಾಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಲ್ಯಾಂಡ್ ಜಿಹಾದ್ ಎಂಬ ಭೂತ ಕಾಣಿಸಿಕೊಂಡಿದ್ದು, ಲ್ಯಾಂಡ್ ಜಿಹಾದ್ ಮೂಲಕ ಕರಾವಳಿ ಜಿಲ್ಲೆಗಳನ್ನು ಇನ್ನೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ನಮ್ಮಲ್ಲಿನ ಭೂಮಿಯನ್ನು ೧೦ ಪಟ್ಟು ಹೆಚ್ಚು ಬೆಲೆ ನೀಡಿ ಖರೀದಿಸುವ ಜಾವ ಕಾರ್ಯನಿರ್ವಹಿಸುತ್ತಿದ್ದು, ಇದರ ಹಿಂದಿನ ಉದ್ದೇಶವನ್ನು ಹಿಂದುಗಳು ಅರ್ಥ ಮಾಡಿಕೊಳ್ಳಬೇಕಿದೆ. ಹಿಂದುಗಳು ಬದುಕಿನ ಅನಿವಾರ್ಯತೆಗಾಗಿ, ಹಣದ ಆಸೆಗೆ ಬಲಿ ಬಿದ್ದು ಪವಿತ್ರವಾದ ಈ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇದೇ ರೀತಿಯಾದರೆ ಮುಂದೊಂದು ದಿನ ಕರಾವಳಿ ಜಿಲ್ಲೆಗಳು ಮತ್ತೊಂದು ಪಾಕಿಸ್ತಾನವಾಗುಬ ಭೀತಿ ಸೃಷ್ಟಿಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿಂಜಾವೇ ಜಿಲ್ಲಾ ಕಾರ್ಯಕಾರಣಿ ಸದಸ್ಯ ಧನಂಜಯ್ ಕೋಟೇಶ್ವರ ಹಿಂದು ಸಮಾಜದ ಮೇಲೆ ಅನೇಕ ರೀತಿಯ ದಾಳಿಗಳು ಆಕ್ರಮಣಗಳು ನಡೆದಿದ್ದರೂ ಹಿಂದು ಧರ್ಮವು ಎಲ್ಲಾ ಧರ್ಮಗಳನ್ನು ಮೀರಿ ಭದ್ರವಾಗಿ ನೆಲೆ ನಿಂತಿದೆ ಎಂದರು.

ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ, ಮತ್ಸ್ಯೋದ್ಯಮಿ ಜಿ.ಪುರುಷೋತ್ತಮ ಆರ್ಕಾಟಿ, ಗಂಗೊಳ್ಳಿ ಶ್ರೀ ಗ್ರಾಮ ಜಟ್ಟಿಗೇಶ್ವರ ದೇವಸ್ಥಾನದ ಅಧ್ಯಕ್ಷ ಮಡಿಕಲ್ ಜನಾರ್ದನ ಖಾರ್ವಿ, ಗಂಗೊಳ್ಳಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಸತೀಶ ಜಿ., ಮಹೇಶ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ನಿತಿನ್ ಖಾರ್ವಿ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಭಾರತ ಅಂದು-ಇಂದು ಜೊತೆಯಲ್ಲಿ ಸನಾತನ ಸಂಸ್ಕೃತಿಯ ಅಳಿವು-ಉಳಿವು ಕುರಿತು ಚಿಂತನ ಮಂಥನ ಕಾರ್ಯಕ್ರಮ ನಡೆಯಿತು.

Exit mobile version