Kundapra.com ಕುಂದಾಪ್ರ ಡಾಟ್ ಕಾಂ

ಹೊಸಾಡು : ಯಂತ್ರ ನಾಟಿ ಮಣ್ಣು ಸಂಗ್ರಹ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ರೈತರು ಮಳೆ ಬರುವ ಮುಂಚಿತವಾಗಿ ಮಣ್ಣನ್ನು ಸಂಗ್ರಹಿಸಿ ಇಟ್ಟುಕೊಂಡರೆ ಯಂತ್ರ ನಾಟಿ ಮಾಡಲು ಮಾಡಲು ಅನುಕೂಲವಾಗುತ್ತದೆ ಎಂದು ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಹೇಳಿದರು.

ಅವರು ಹೊಸಾಡು ದೇವಸ್ಥಾನದ ಆವರಣದಲ್ಲಿ ನಬಾರ್ಡ್ ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ತೆಂಗು ಬೆಳೆಗಾರರ ಸಂಘ ಇವರ ಆಶ್ರಯದಲ್ಲಿ ನಡೆದ ಯಂತ್ರ ನಾಟಿ ಮಣ್ಣು ಸಂಗ್ರಹ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಈಶ್ವರ ನಾಯ್ಕ್ ಇವರು ರೈತರಿಗೆ ಯಂತ್ರ ನಾಟಿ ಮತ್ತು ಇದರ ಉಪಯೋಗದ ಬಗ್ಗೆ ಮಾಹಿತಿ ನೀಡಿ ಹೆಚ್ಚು ಇಳುವರಿ ಕಡಿಮೆ ಖರ್ಚು ಯಂತ್ರ ನಾಟಿಯಿಂದ ಪ್ರಯೋಜನವಾಗುತ್ತದೆ. ಸ್ಥಳೀಯ ಕೃಷಿಕರಾದ ಕೃಷ್ಣಮೂರ್ತಿ ನಾವಡ, ತೆಂಗು ಬೆಳೆಗಾರರ ಸಂಘದ ನರಸಿಂಹ ಗಾಣಿಗ ಹರೆಗೋಡು ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಕೃಷಿಕ ಗಿರಿಜಾ ದೇವಾಡಿಗ ಸ್ವಾಗತಿಸಿದರು. ರಾಮಚಂದ್ರ ನಾವಡ ವಂದಿಸಿದರು.

Exit mobile version