Kundapra.com ಕುಂದಾಪ್ರ ಡಾಟ್ ಕಾಂ

ಗಿಳಿಯಾರು: ಹೊಳೆಯ ಪಕ್ಕದ ಹಡಿಲು ಭೂಮಿಗೆ ಅಕ್ರಮವಾಗಿ ಮಣ್ಣು ತುಂಬಿಸುತ್ತಿದ್ದ ಲಾರಿ ತಡೆದು ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರು ಪರಿಸರದಲ್ಲಿರುವ ಹರಿಯುವ ನೀರಿನ ಸೂಲಡ್ಪು ಹೊಳೆಯ ಪಕ್ಕದಲ್ಲಿ ಸುಮಾರು 8 ಎಕರೆ ಹಡಿಲು ಭೂಮಿಯಲ್ಲಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಉದ್ದೇಶಕ್ಕೆ ಮಣ್ಣು ತುಂಬಿಸಿ ಎತ್ತರಿಸುವ ನಡೆಸುತ್ತಿದ್ದು, ಇದರಿಂದ ನೆರೆ ಹಾವಳಿ ಮತ್ತಿತರ ಪ್ರಾಕೃತಿಕ ಸಮಸ್ಯೆಗಳು ಮುಂದೆ ಎದುರಾಗಲಿದೆ ಎಂದು ಗಿಳಿಯಾರಿನ ಸ್ಥಳೀಯರು ಹಡೋಲಿಗೆ ಮಣ್ಣು ತುಂಬಿಸುತ್ತಿದ್ದ ಲಾರಿಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

ಕಳೆದ ಎರಡು ವಾರಗಳಿಂದ ಗಿಳಿಯಾರಿನ ಸೂಲಡ್ಪು ಹೊಳೆಯ ಹಡಿಲಿ ಭೂಮಿಯಲ್ಲಿ ನಿರಂತರವಾಗಿ ಮಣ್ಣು ತುಂಬಿಸುವ ಕಾರ‍್ಯ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿ ಕೋಟ ಪಂಚಾಯಿತಿ ಮಾಹಿತಿ ನೀಡಿದ್ದರು. ಆ ಸಂದರ್ಭ ಕೋಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾಷ್ ಖಾರ್ವಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಅವರು ಸ್ಥಳೀಯರೊಂದಿಗೆ ಆಗಮಿಸಿ ಕಾಮಗಾರಿಯ ಬಗ್ಗೆ ಮಾಹಿತಿ ಕೇಳಿದ್ದರು. ಸ್ಥಳ ಖರೀದಿಸಿ ಮಣ್ಣು ತುಂಬಿಸುತ್ತಿರುವ ಮಾಲಕರು ಹೊಳೆಯ ನೀರು ಹೋಗಲು ಸಮಸ್ಯೆಯಾಗದಂತೆ, ನೆರೆ ಹಾವಳಿಯಾಗದಂತೆ ವ್ಯವಸ್ಥೆ ಕಲ್ಪಿಸಿ ಮುಂದೆ ಕಾಮಗಾರಿ ಮಾಡುವುದಾಗಿ ತಿಳಿಸಿ, ಸೂಕ್ತ ದಾಖಲೆ ಒದಗಿಸುವುದಾಗಿ ತಿಳಿಸಿದ ಬಳಿಕ ಒಂದು ವಾರಗಳ ಕಾಲ ಕಾಲಾವಕಾಶ ನೀಡಲಾಗಿತ್ತು.

ವಾರ ಕಳೆದರು ಹಡೋಲಿನಲ್ಲಿ ಮಣ್ಣು ತುಂಬಿಸುವ ಕೆಲಸ ನಡೆಸುತ್ತಿದ್ದವರಿಂದ ಯಾವುದೇ ಪೂರಕ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಸ್ಥಳೀಯರು ಸ್ಥಳ ಪರಿಶೀಲನೆ ನಡೆಸಿದಾಗ, ಹೊಳೆ ಪಕ್ಕದ ಹಡೋಲಿನಲ್ಲಿರುವ ಕೆರೆ ಮತ್ತು ಸೂಲಡ್ಪು ಹೊಳೆಗೆ ಮಣ್ಣು ತುಂಬಿಸಿರುವುದನ್ನು ಗಮನಿಸಿ ಸ್ಥಳೀಯರು ಶುಕ್ರವಾರದಂದು ಮುಂಜಾನೆಯೇ ಗಿಳಿಯಾರು ಹಡೋಲಿನಲ್ಲಿ ಜಮಾಯಿಸಿ, ಜಾಗಕ್ಕೆ ಮಣ್ಣು ತುಂಬಿಸುತ್ತಿದ್ದ ಲಾರಿಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಅಲ್ಲದೇ ಹಡೋಲಿನಲ್ಲಿರುವ ಸರಕಾರಿ ಜಾಗ ಮತ್ತು ವಾಣಿಜ್ಯ ಉದ್ದೇಶಕ್ಕೆ ಮಣ್ಣು ತಂಬಿಸುತ್ತಿರುವವರು ಖರೀದಿಸಿದ ಜಾಗದ ನಕ್ಷೆ ನೀಡಬೇಕು. ನೂತನ ಎನ್‌ಜಿಟಿ ತೀರ್ಪಿನ ಅನ್ವಯ ನಿಯಮಗಳನ್ನು ಪಾಲಿಸಿ, ಹೊಳೆಯ ಸುತ್ತ ಬಫರ್ ಝೋನ್ ನಿರ್ಮಿಸಬೇಕು. ನಿರಂತರ ನೆರೆ ಹಾವಳಿಯುಂಟಾಗುವು ಪ್ರದೇಶದಲ್ಲಿ ಮಣ್ಣು ತುಂಬಿಸುದರಿಂದ ಮುಂದೆ ಆಗುವ ಸಮಸ್ಯೆಗಳಿಗೆ ಜವಾಬ್ದಾರರಾಗಬೇಕು ಎನ್ನುವ ಮನವಿಯನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಕೋಟ ಪಂಚಾಯಿತಿ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಸದಸ್ಯರಾದ ಅಜಿತ್ ದೇವಾಡಿಗ, ಸಂತೋಷ ಪ್ರಭು, ಪಾಂಡು, ತ್ರಿಶೂಲ್ ಅಸೋಸಿಯೇಟ್ಸ್ ನ ವಸಂತ್ ಗಿಳಿಯಾರ್, ಅರುಣ್ ಶೆಟ್ಟಿ ಪಡುಮನೆ, ಅಶೋಕ್ ಶೆಟ್ಟಿ ಬನ್ನಾಡಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಭರತ್ ಕುಮಾರ್ ಶೆಟ್ಟಿ, ಶಂಕರ್ ನಾರಾಯಣ ಹೇರ್ಳೆ, ಪ್ರಸಾದ್ ಶೆಟ್ಟಿ ಪಡುಮನೆ, ರಾಘವೇಂದ್ರ ಶೆಟ್ಟಿ ಹಂಡಿಕೆರೆ ಮನೆ, ಸತೀಶ್ ಶೆಟ್ಟಿ ಬಡಾಮನೆ, ಹರಿದಾಸ ಮಯ್ಯ, ಕುಮಾರ್ ದೇವಾಡಿಗ, ಪ್ರಕಾಶ್ ಹೇರ್ಳೆ, ಸುಬ್ರಹ್ಮಣ್ಯ ಹೇರ್ಳೆ, ಸುರೇಶ್ ಪೂಜಾರಿ, ಸುಭಾಸ್ ಪೂಜಾರಿ, ಯೋಗಾನಂದ ಹೆಗ್ಡೆ, ನಿತೀಶ್ ಕಾಂಚನ್,ಯೋಗಾನಂದ ಪೂಜಾರಿ, ರಾಘವೇಂದ್ರ ದೇವಾಡಿಗ, ದಯಾನಂದ ದೇವಾಡಿಗ, ಮಹೇಶ್ ದೇವಾಡಿಗ, ವಿನೀಶ್ ಅಜೀಲ, ಶ್ರವಣ್ ಕುಮಾರ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಸುಭಾಸ್ ಹೇರ್ಳೆಬೆಟ್ಟು, ರವಿ ಗಿಳಿಯಾರು, ಸಂತೋಷ್ ಶೆಟ್ಟಿ ಹಂಡಿಕೆರೆಮನೆ, ಅರುಣ್ ಕುಮಾರ್ ಶೆಟ್ಟಿ ಮಠೀನ್ ಕೆರೆಮನೆ, ಶಂಕರ್ ದೇವಾಡಿಗ, ರಜತ್ ತೆಕ್ಕಟ್ಟೆ, ದಿನೇಶ್ ಪೂಜಾರಿ ಚಾರ್ಕೂರು ಮನೆ, ರಾಜಾರಾಮ್ ಶೆಟ್ಟಿ, ಮಿಥುನ್ ಶೆಟ್ಟಿ ಪಡುಮನೆ, ಪಾಂಡು ಪೂಜಾರಿ ಹಾಡಿಕೆರೆ, ಕಿರಣ್ ಆಚಾರ್ಯ, ಸುಧೀರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅಶ್ವತ್ ಆಚಾರ್ಯ

Exit mobile version