Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆ ಶತಮಾನೋತ್ಸವ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜ್ಞಾನಕ್ಕೆ ಸರಿಸಾಟಿಯಾದ ಸಂಪತ್ತು ವಿಶ್ವದಲ್ಲಿ ಯಾವುದೂ ಇಲ್ಲ. ಜ್ಞಾನ ಪವಿತ್ರವಾದುದು. ಶ್ರೇಷ್ಠವಾದ ಜ್ಞಾನಕ್ಕೆ ಎಂದೂ ತುಕ್ಕು ಹಿಡಿಯದು. ಜ್ಞಾನವನ್ನು ನೀಡುವ ಶಾಲೆ ಹಾಗೂ ಶಿಕ್ಷಕರ ಪಾತ್ರ ಕೂಡಾ ಅತ್ಯಂತ ಶ್ರೇಷ್ಠವಾದುದು ಎಂದು ಪುರೋಹಿತರಾದ ವೇ|ಮೂ|ರಾಮಕೃಷ್ಣ ಭಟ್ ಶಾರ್ಕೆ ಹೇಳಿದರು. ಕುಂದಾಪುರ ತಾಲೂಕು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಅದ್ಯಕ್ಷತೆ ವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನರಸಿಂಹ ಭಟ್ ನೆಂಪು ದಾನಿಗಳಿಗೆ ಗೌರವಾರ್ಪಣೆ ಮಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಕಲ್ಮಾಡಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಹರ್ಜಿ ಕರುಣಾಕರ ಶೆಟ್ಟಿ, ಗ್ರಾಮ ಪಂಚಾಯತ್ ಉಪಾದ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು, ಗ್ರಾಮ ಪಂಚಾಯತ್ ಸದಸ್ಯರಾದ ಉದಯ್ ಕೆ.ನಾಯ್ಕ್, ಸಿಂಗಾರಿ, ಲಕ್ಷ್ಮೀ ಆತ್ರಾಡಿ, ಬೆಂಗಳೂರು ಉದ್ಯಮಿ ಬಿ.ಎಂ.ಬಾಳಿಕೆರೆ, ವಂಡ್ಸೆ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಸುಧೀರ್ ಶೆಟ್ಟಿ, ಮುಂಬಯಿ ಉದ್ಯಮಿ ರಾಘವೇಂದ್ರ ಜಡ್ಡು, ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ, ಶಿಕ್ಷಣ ಸಂಯೋಜಕರಾದ ನಿತ್ಯಾನಂದ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಭಾಸ್ಕರ ನಾಯ್ಕ್, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಚಂದ್ರ ರಾಯಪ್ಪನಡಿ, ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ.ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಮೋಹಿನಿ ಬಾ ಸ್ವಾಗತಿಸಿ, ಸಹಶಿಕ್ಷಕ ಶ್ರೀನಿವಾಸ ಎಚ್. ದಾನಿಗಳ ಪಟ್ಟಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್.ವಂದಿಸಿದರು. ಸಹಶಿಕ್ಷಕರಾದ ಆಶಾ, ಶ್ರೀನಿವಾಸ, ನಾಗವೇಣಿ ವಿವಿಧ ಪಟ್ಟಿಗಳನ್ನು ವಾಚಿಸಿದರು. ಶಿಕ್ಷಕರಾದ ಗಣೇಶ ದೇವಾಡಿಗ, ವಸಂತರಾಜ್ ಶೆಟ್ಟಿ, ರವಿರಾಜ್ ಶೆಟ್ಟಿ ನೂಜಾಡಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ವಂಡ್ಸೆ ಪೇಟೆಯಲ್ಲಿ ಭವ್ಯ ಪುರಮೆರವಣಿಗೆ ನಡೆಯಿತು. ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ.ಶಿವರಾಮ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಧ್ವಜಾರೋಹಣ ನೆರವೇರಿಸಿದರು.

Exit mobile version