Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಬೀದಿಯಲ್ಲಿ ಅಲೆಯುತ್ತಿದ್ದ ಐವರು ಅನಾಥರು ವಿಶ್ವಾಸದ ಮನೆ ದಾಖಲು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈ ಪರಿಸರದಲ್ಲಿ ಅನಾಥರಾಗಿ ಅಲೆದಾಡುತ್ತಿದ್ದ ಐವರನ್ನು ಪಾಸ್ಟರ್ ಸುನಿಲ್ ಡಿಸೋಜ ನೇತೃತ್ವದ ಶಂಕರಪುರದ ವಿಶ್ವಾಸದ ಮನೆ ಕಾರ್ಯಕರ್ತರು ಬುಧವಾರ ನಡೆಸಿದ ಮಾನವೀಯ ಕಾರ್ಯಾಚರಣೆಯಲ್ಲಿ ವಿಶ್ವಾಸದ ಮನೆಗೆ ಸೇರಿಸಲಾಯಿತು. ಇಬ್ಬರು ವೃದ್ಧೆಯರು ಬೈಂದೂರು ಬಸ್‌ಸ್ಟ್ಯಾಂಡ್ ಬಳಿ, ೪೦-೪೫ ವಯೋಮಾನದ ಒಬ್ಬ ಗಂಡಸು ಬೈಪಾಸ್ ಹತ್ತಿರ, ಒಬ್ಬ ವೃದ್ಧ ಶಿರೂರು ಗ್ರೀನ್‌ವ್ಯಾಲಿ ಶಾಲೆಯ ಸನಿಹ, ಒಬ್ಬ ಯುವಕ ಶಿರೂರು ಪೇಟೆಯಲ್ಲಿ ಅಲೆದಾಡುತ್ತಿದ್ದರು.

ಕಾರ್ಯಾಚರಣೆಯಲ್ಲಿ ವಿಶ್ವಾಸದ ಮನೆಯ ಮುಖ್ಯಸ್ಥ ಪಾಸ್ಟರ್ ಸುನಿಲ್ ಡಿಸೋಜ ಜತೆ ಎಲಿಜಬೆತ್ ಡಿಸೋಜ, ಪ್ರದೀಪ ಮಾಬೆನ್, ಸಿಬ್ಬಂದಿಗಳಾದ ನವೀನ್, ಆಲ್ವಿನ್, ಪ್ರೇಮಾ ಲೋಬೊ, ಪ್ರಫುಲ್ಲಾ ಲೋಬೊ ಇದ್ದರು. ಗಂಗೊಳ್ಳಿಯ ಸಾಮಾಜಿಕ ಕಾರ್ಯಕರ್ತ ’ಗಂಗೊಳ್ಳಿ 24×7’ ಸೇವೆಯ ಇಬ್ರಾಹಿಂ ಗಂಗೊಳ್ಳಿ ತಮ್ಮ ಅಂಬ್ಯುಲನ್ಸ್ ಸಹಿತ ಕೈಜೋಡಿಸಿದರು.

?
Exit mobile version