ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಾಲೂಕು ಕಸಾಪ ಘಟಕದಡಿಯಲ್ಲಿ ಬರುವ ಕೋಟೇಶ್ವರ ವಲಯ ಕಸಾಪ ಅಧ್ಯಕ್ಷರಾಗಿ ಅಶೋಕ ತೆಕ್ಕಟ್ಟೆಯವರನ್ನು ನೇಮಿಸಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಅಶೋಕ ತೆಕ್ಕಟ್ಟೆಯವರು ಬಹುಮುಖ ಪ್ರತಿಭೆಯಾಗಿದ್ದು ಸ್ನಾತಕೋತ್ತರ ಪದವಿಧರರು. ಕತೆ, ಕವನ, ಲೇಖನ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಇವರು ಕಳೆದ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದೀಗ ಅವರನ್ನು 2016-19ರ ಅವಧಿಗೆ ಕಸಾಪ ಕೋಟೇಶ್ವರ ಘಟಕಕ್ಕೆ ಅಧ್ಯಕ್ಷರಾಗಿ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇಮಕ ಮಾಡಿರುತ್ತಾರೆ.