Kundapra.com ಕುಂದಾಪ್ರ ಡಾಟ್ ಕಾಂ

ಯುವ ಮೆರಿಡಿಯನ್‌ನಲ್ಲಿ ಮಧುರ ಮಧುರವೀ ಮಂಜುಳ ಗಾನಕ್ಕೆ ಮಾರುಹೋದ ಶೋತ್ರುಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ದೇಶ ಚನ್ನ… ಈ ಮಣ್ಣು ಚಿನ್ನ…. ಕಣ್ಣು ಕಣ್ಣು ಒಂದಾಯಿತು, ನನ್ನ ನಿನ್ನ ಮನಸೇರಿತು… ನಿಲ್ಲು ನಿಲ್ಲೆ ಪತಂಗ… ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ… ಆಚಾರವಿಲ್ಲದ ನಾಲಿಗೆ… ಮುಂತಾದ ಹಳೆಯ ಹಾಡುಗಳು ಹೊಸಬರ ಕಂಠದಲ್ಲಿ ಮೂಡಿಬಂದು ನೆರೆದಿದ್ದ ಶೋತ್ರುಗಳನ್ನು ದಶಕಗಳ ಹಿಂದಕ್ಕೆ ಕೊಂಡ್ಯೊಯ್ದರೇ, ಹಾಡುಗಳ ನಡು ನಡುವೆ ನಡೆದ ನೃತ್ಯರೂಪಕಗಳು ಪ್ರೇಕ್ಷಕರಿಗೆ ಮನೊಲ್ಲಾಸ ನೀಡುತ್ತಿದ್ದವು.

ದೂರದರ್ಶನ ಕೇಂದ್ರ ಬೆಂಗಳೂರು, ಬೈಲೂರು ಎಜುಕೇಶನ್ ಟ್ರಸ್ಟ್ ಕುಂದಾಪುರ, ಆಕಾಶವಾಣಿ ಮಂಗಳೂರು, ಇಸಿಆರ್ ಎವಿಯೇಶನ್ ಅಕಾಡೆಮಿ ಕೋಟೇಶ್ವರ, ಯುವ ಇನ್‌ಫ್ರಾಸ್ಟ್ರಕ್ಟರ್ ಕುಂದಾಪುರದ ಸಂಯೋಜನೆಯಲ್ಲಿ ವಿಜಯವಾಣಿ ದಿನಪತ್ರಿಕೆಯ ಮಾಧ್ಯಮ ಸಹಭಾಗಿತ್ವದಲ್ಲಿ ಕೋಟೇಶ್ವರ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜರುಗಿದ ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ ಹಳೆಯ ಕನ್ನಡ ಚಲನಚಿತ್ರಗೀತೆಗಳ ಸಂಗೀತ -ನೃತ್ಯಾವಳಿಗಳು ಮಧುರ ಮಧುರವೀ ಮಂಜುಳಗಾನ ಹಾಡಿನ ಮೂಲಕವೇ ಆರಂಭಗೊಂಡು ನೆರೆದಿದ್ದ ನೂರಾರು ಪ್ರೇಕ್ಷಕರ ಮನತುಂಬಿದವು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರದ ಆಸುಪಾಸಿನ ಪ್ರತಿಭೆಗಳಾದ ರಾಮ ಬೈಂದೂರು, ಗೌರಿ ತಗ್ಗರ್ಸೆ, ವಾಣಿಶ್ರಿ ಶೆಣೈ, ರಾಜೇಶ್ ಶಾನುಭೋಗ್, ವೈಷ್ಣವಿ ಅಡಿಗ, ವೀಣಾ ಶೆಣೈ, ರಜತ್ ಮಯ್ಯ, ಆಶಾ ಬೀಜಾಡಿ ಮುಂತಾದವರೊಂದಿಗೆ ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ತಮ್ಮ ಗಾನಸುಧೆಯ ಮೂಲಕ ಶೋತ್ರುಗಳನ್ನು ಗಾನಕಡಲಲ್ಲಿ ತೇಲಿಸಿದರು.

ಉದ್ಘಾಟನೆ:
ಒಡೆಯೂರು ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ ನೈತಿಕ, ಮಾನವೀಯ ಪ್ರಜ್ಞೆ ಮನುಷ್ಯನ ಬದುಕಿನಲ್ಲಿ ಮಧುರತೆಯನ್ನು ತುಂಬುತ್ತದೆ. ಮಧುರ ಮಧುರವೀ ಮಂಜುಳಗಾನದಂತಹ ಕಾರ್ಯಕ್ರಮಗಳು ಸನಾತನ ಪ್ರಜ್ಞೆಯನ್ನು ಗಟ್ಟಿಗೊಳಿಸುವ ಕಾರ್ಯಕ್ರಮ. ಸನಾತನ ಹಾಗೂ ನೂತನ ಎಳೆಯ ನಡುವೆ ಈ ಕಾರ್ಯಕ್ರಮ ಕೇಳುಗರಿಗೆ ಸನಾತನ ಸಂಸ್ಕೃತಿಯ ಅರಿವು ಮೂಡಿಸುತ್ತದೆ ಎಂದರು.

ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ ಪ್ರಾಸ್ತಾವಿಕ ನುಡಿಗಳನ್ನಾಡಿ ಗ್ರಾಮೀಣ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಕುಂದಾಪುರದಲ್ಲಿ ಮೂರನೇ ಭಾರಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲೊಂದು ಆನಂದ, ಮಧುರತೆ, ಸಾಹಿತ್ಯವಿದ್ದು ಕುಟುಂಬದ ಮಂದಿಯೆಲ್ಲ ಸೇರಿ ನೋಡಿ ಆನಂದಿಸಬಹುದಾಗಿದೆ. ಮಧುರತೆಯ ಹಿಂದೊಂದು ಆದ್ಯಾತ್ಮದ ಚಿಂತನೆಯಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಉದ್ಯಮಿಗಳಾದ ಬಿ. ಸಚ್ಚಿದಾನಂದ ಶೆಟ್ಟಿ, ವಾಸುದೇವ ಅಡಿಗ, ಎನ್.ಟಿ. ಪೂಜಾರಿ, ಅಭಿನಂದನ್ ಶೆಟ್ಟಿ, ಕೃಷ್ಣನಂದ ಚಾತ್ರ, ಜೈಶೀಲ ಶೆಟ್ಟಿ, ಎಸ್.ವಿ. ದಿನೇಶ್ ನೆರಂಬಳ್ಳಿ, ವಿಜಯ ಶೆಟ್ಟಿ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಕೆದೂರು ಗ್ರಾಪಂ ಅಧ್ಯಕ್ಷ ಸಂಪತ್‌ಕುಮಾರ್ ಶೆಟ್ಟಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಹಿರಿಯಣ್ಣ ಸಾಹಿತಿಗಳಾದ ಕೋಟೇಶ್ವರ ಸೂರ್ಯನಾರಾಣ ರಾವ್, ಬೆಂಗಳೂರು ಕಾಶಿನಾಥ ದೀಕ್ಷಿತ್, ಕುಂದಾಪುರ ಐಎಂಎ ಅಧ್ಯಕ್ಷೆ ಡಾ. ಭವಾನಿ ರಾವ್, ಡಾ. ಪ್ರಕಾಶ್ ತೋಳಾರ್, ರಥಶಿಲ್ಪಿ ಲಕ್ಷಿನಾರಾಯಣ ಆಚಾರ್ಯ, ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ದೂರದರ್ಶನದ ಉಪಮಹಾನಿರ್ದೇಶಕ ಎನ್. ಚಂದ್ರಶೇಖರ್, ಮೊದಲಾವರು ಇದ್ದರು. ಯುವ ಮೆರಿಡಿಯನ್ ಉದಯಕುಮಾರ್ ಶೆಟ್ಟಿ ಸ್ವಾಗಿತಿಸಿ, ವಿಜಯಕುಮಾರ್ ಶೆಟ್ಟಿ ವಂದಿಸಿದರು. /ಕುಂದಾಪ್ರ ಡಾಟ್ ಕಾಂ ಸುದ್ದಿ./

Exit mobile version