Kundapra.com ಕುಂದಾಪ್ರ ಡಾಟ್ ಕಾಂ

ಬದುಕಿನುದ್ದಕ್ಕೂ ಪ್ರೀತಿಯನ್ನು ಹಂಚಿ ಮರೆಯಾದ ಗೆಳಯ ಅವಿನಾಶ ಹೆಬ್ಬಾರ್: ಕಿಶೋರ್ ಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಳ, ಸಜ್ಜನಿಕೆ, ವೃತ್ತಿ ನಿಷ್ಠೆಯೊಂದಿಗೆ ಪ್ರಾಮಾಣಿಕ ಬದುಕಿನುದ್ದಕ್ಕೂ ಪ್ರೀತಿಯನ್ನು ಹಂಚಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದ ಅವಿನಾಶ್ ಹೆಬ್ಬಾರ್ ಅವರು ಸಿತಾರ್ ವಾದಕನಾಗ ಬೇಕೆಂಬ ಹಂಬಲದಿಂದ ತನ್ನ ೩೦ನೇ ವಯಸ್ಸಿನಲ್ಲಿ ಸಿತಾರ್ ಕಲಿತು ಹತ್ತಾರು ಕಛೇರಿಗಳನ್ನು ನೀಡಿ ಸಂಗೀತ ಕ್ಷೇತ್ರದಲ್ಲಿ ಭರವಸೆಯನ್ನು ಮೂಡಿಸುತ್ತಿರುವ ಕಾಲಘಟ್ಟದಲ್ಲಿ ಅಕಾಲವಾಗಿ ನಮ್ಮನ್ನು ಅಗಲಿ ಮರೆಯಾಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್‌ಕುಮಾರ್ ಕುಂದಾಪುರ ಹೇಳಿದರು

ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಸ್ಕೂಲ್ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಕುಂದಾಪುರದ ಮಾಜಿ ಕಾರ್ಯದರ್ಶಿ ಅವಿನಾಶ್ ಹೆಬ್ಬಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ರೋಟರಿ ಜಿಲ್ಲಾ ಗವರ್ನರ್ ಎ.ಎಸ್.ಎನ್. ಹೆಬ್ಬಾರ್, ಉದ್ಯಮಿ ಪ್ರಶಾಂತ್ ತೋಳಾರ್, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ನಿಯೋಜಿತ ಅಧ್ಯಕ್ಷ ನರಸಿಂಹ ಹೊಳ್ಳ, ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಡಾ. ಎಂ. ಎನ್. ಅಡಿಗ, ಡಾ. ಬಿ. ಆರ್. ಶೆಟ್ಟಿ, ಡಾ. ರಾಜರಾಮ್ ಶೆಟ್ಟಿ, ನ್ಯಾಯವಾದಿ ಕೆ.ಸಿ. ಶೆಟ್ಟಿ, ರೋಟರಿ ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಅವಿನಾಶ್ ಹೆಬ್ಬಾರ್ ಅವರ ಒಡನಾಟವನ್ನು ಸ್ಮರಿಸಿಕೊಂಡು ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು. ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷ ಕೆ. ಆರ್. ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ನಿಯೋಜಿತ ಕಾರ್ಯದರ್ಶಿ ಸಾಲಗದ್ದೆ ಶಶಿಧರ ಶೆಟ್ಟಿ ವಂದಿಸಿದರು.

Exit mobile version