Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ದೇವಾಡಿಗ ವೈಭವ-2016ಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು.ಮೇ21: ದೇವಾಡಿಗರು ಸಂಘಟಿತರಾದರೆ ಮಾತ್ರ ಈ ಸಮಾಜದ ಶಕ್ತಿ, ಸಾಮರ್ಥ್ಯದ ಬಗೆಗೆ ಭರವಸೆ ಮೂಡಲು ಸಾಧ್ಯ. ಸಂಘಟಿತರಾಗುವುದರೊಂದಿಗೆ ಸಮಾಜದ ಬಡವರು, ಪ್ರತಿಭಾನ್ವಿತರನ್ನು ಗುರುತಿಸಿ ಮೇಲೆತ್ತುವ ಕಾರ್ಯವಾಗಬೇಕು. ನಮ್ಮ ಒಗ್ಗಟ್ಟು ಜನಪ್ರತಿನಿಧಿಗಳು ಹಾಗೂ ಸರಕಾರದ ಕಣ್ಣು ತೆರೆಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮಹಾಮಂಡಲದ ಅಧ್ಯಕ್ಷ ರಘುರಾಮ್ ದೇವಾಡಿಗ ಹೇಳಿದರು.

ಅವರು ಶನಿವಾರ ದೇವಾಡಿಗ ವೈಭವ ಕಲ್ಚರಲ್ ಕ್ಲಬ್ ರಿ ಸಾರಥ್ಯದಲ್ಲಿ ದೇವಾಡಿಗರ ಒಕ್ಕೂಟ ರಿ. ಬೈಂದೂರು ಹಾಗೂ ಮುಂಬೈ ದೇವಾಡಿಗ ವೆಲ್‌ಫೇರ್ ಅಸೋಸಿಯೇಶನ್ ರಿ. ಸಹಯೋಗದೊಂದಿಗೆ ಇಲ್ಲಿನ ಜೆ.ಎನ್.ಆರ್. ಕಲಾಮಂದಿರದಲ್ಲಿ ಆಯೋಜಿಸಲಾದ ದೇವಾಡಿಗ ವೈಭವ 2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇವಾಡಿಗ ಸಮಾಜದಲ್ಲಿ ಈಡೇರಬೇಕಾದ ಹತ್ತಾರು ಬೇಡಿಕೆಗಳಿದ್ದು ಸಂಘಟಿತರಾಗಿ ಬೇಡಿಕೆಯಿಟ್ಟಾಗ ಮಾತ್ರ ಅವುಗಳಿಗೊಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಯಾವುದೇ ಸಮುದಾಯ ಮುಂಚೂಣಿಗೆ ಬರಬೇಕಾದರೇ ಆ ಸಮುದಾಯದವರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಿಬೇಕು. ಅಂತಹ ವಾತಾವರಣ ನಿರ್ಮಿಸುವ ಕೆಲಸ ಸಮುದಾಯದ ನಾಯಕರುಗಳಿಂದ ಆಗಬೇಕಿದೆ ಎಂದರು.

ಕುಂದಾಪುರದಲ್ಲಿ ದೇವಾಡಿಗ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ಸರಕಾರದ ಸ್ಥಳ ಗುರುತು ಕಾರ್ಯ ನಡೆಯುತ್ತಿದೆ. ಭವನ ನಿರ್ಮಿಸುವ ಸಂದರ್ಭದಲ್ಲಿ ಒಂದು ಕೋಟಿ ಅನುದಾನ ನೀಡುವುದಾಗಿ ಭರವಸೆ ಇತ್ತರು. ಹೇನುಬೇರು ಪ್ರದೇಶದಲ್ಲಿ ಈಗಾಗಲೇ ರಸ್ತೆ, ವಿದ್ಯುತ್‌ದೀಪ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಸ್ ರೂಟ್ ಕೂಡ ತಯಾರಾಗಿದ್ದು ಒಂದೊಂದೇ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು ಎಂದವರು ತಿಳಿಸಿದರು.

ಬೈಂದೂರು ದೇವಾಡಿಗ ಒಕ್ಕೂಟದ ಅಧ್ಯಕ್ಷ ಕೆ.ಜಿ. ಸುಬ್ಬ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಂಕರ ಪೂಜಾರಿ, ತಾಪಂ ಸದಸ್ಯರಾದ ರಾಜು ದೇವಾಡಿಗ, ಸುಜಾತ ದೇವಾಡಿಗ, ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ವಾಮನ್ ಮುರೋಳಿ, ಮಂಗಳೂರು ಎಸ್.ಡಿಎಂ ಪಿ.ಜಿ ಸೆಂಟರ್ ನಿರ್ದೇಶಕ ಡಾ. ಕೆ. ದೇವರಾಜ್, ಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಪ್ರಗತಿ ಸೌಹಾರ್ದ ಕೋ ಆಪರೇಟಿವ್‌ನ ಲಕ್ಷೀಕಾಂತ ಬೆಸ್ಕೂರು, ಪ್ರಿಯದರ್ಶಿನಿ ಬೆಸ್ಕೂರು, ಬೈಂದೂರು ದೇವಾಡಿಗ ಒಕ್ಕೂಟದ ಗೌರವಾಧ್ಯಕ್ಷ ನಾರಾಯಣ ದೇವಾಡಿಗ, ಬೆಂಗಳೂರು ದೇವಾಡಿಗ ನವೋದಯ ಸಂಘದ ಅಧ್ಯಕ್ಷ ಹರಿ ದೇವಾಡಿಗ, ಬೈಂದೂರು ದೇವಾಡಿಗ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ದೇವಾಡಿಗ, ಉಡುಪಿ ನಾದಶ್ರೀ ಕ್ರೆಡಿಕ್ ಕೋ-ಆಪರೇಟಿವ್ ಅಧ್ಯಕ್ಷ ಚಂದ್ರಕಾಂತ್ ದೇವಾಡಿಗ, ಉದ್ಯಮಿ ನರಸಿಂಹ ದೇವಾಡಿಗ, ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಬಿಜೂರು ಗ್ರಾಪಂ ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ, ಖಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ, ಕುಂದಾಪುರ ದೇವಾಡಿಗ ಸೇವಾ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷ ಮಂಜು ದೇವಾಡಿಗ, ಕಿರಿಮಂಜೇಶ್ವರ ಗ್ರಾಪಂ ಸದಸ್ಯ ಈಶ್ವರ ದೇವಾಡಿಗ, ಭಟ್ಕಳ ದೇವಾಡಿಗ ಸಂಘದ ಅಧ್ಯಕ್ಷ ಪರಮೇಶ್ವರ ದೇವಾಡಿಗ, ಎನ್‌ಎಂ ದೇವಾಡಿಗ, ಮಾಧವ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಮಣ್ಣು ದೇವಾಡಿಗ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಸಂತಕುಮಾರ್ ನಿಟ್ಟೆ ದಿಕ್ಸೂಚಿ ಭಾಷಣ ಮಾಡಿದರು. ರಂಗನಟ ಗಿರೀಶ್ ಬೈಂದೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೇವಾಡಿಗ ವೈಭವದ ಜೊತೆ ಕಾರ್ಯದರ್ಶಿ ಅವಿನಾಶ್ ಬಿ. ದೇವಾಡಿಗ ಸ್ವಾಗತಿಸಿದರು. ಪ್ರವೀಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Exit mobile version