Kundapra.com ಕುಂದಾಪ್ರ ಡಾಟ್ ಕಾಂ

ಜಯಪ್ರಕಾಶ್ ಹೆಗ್ಡೆ ಬೆಂಬಲಿಗರಿಂದ ಕೋಟ ಬ್ಲಾಕ್ ವ್ಯಾಪ್ತಿಯ ಜನಪರ ಪ್ರಗತಿಪರ ವೇದಿಕೆ ಅಸ್ತಿತ್ವಕ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲೆಯಾದ್ಯಂತ ಉದ್ಭವವಾಗಿರುವ ಮರಳು ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, 9/11ರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಅಕ್ರಮ ಸಕ್ರಮ ಹಕ್ಕುಪತ್ರ ವಿತರಣೆಯಲ್ಲಿನ ಗೊಂದಲ ಮುಂತಾದ ಸಾರ್ವಜನಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಟ ನೀಡಲು ಜನಪರ ಪ್ರಗತಿಪರ ವೇದಿಕೆ ಸದಾ ಸಕ್ರಿಯವಾಗಿರಬೇಕು. ಈ ಕುರಿತು ಸ್ಪಂದನೆಗೆ ತಾನು ಸದಾ ಸಿದ್ಧನಿರುವುದಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ಕೋಟ ಬ್ಲಾಕ್ ವ್ಯಾಪ್ತಿಯ ಬೆಂಬಲಿಗರ, ಹಿತೈಷಿಗಳ ಹಾಗೂ ಸಮಾನ ಮನಸ್ಕರ ಸಭೆಯು ಇಂದು ಕೋಟದ ಮಾಂಗಲ್ಯ ಸಭಾಮಂದಿರದಲ್ಲಿ ನಡೆಯಿತು. ಕಳೆದ ಮಾರ್ಚ್ ತಿಂಗಳಲ್ಲಿ ಹೆಗ್ಡೆ ಬೆಂಬಲಿಗರಿಂದ ಮೌಲಿಕ ರಾಜಕಾರಣವನ್ನು ಎತ್ತಿ ಹಿಡಿಯುವ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕುಂದಾಪುರದಲ್ಲಿ ಸ್ಥಾಪನೆಗೊಂಡ ಜನಪರ ಪ್ರಗತಿಪರ ವೇದಿಕೆಯ ಘಟಕವನ್ನು ಕೋಟದ ಖ್ಯಾತ ಸಮಾಜಸೇವಕ ಗೋಪಾಲ ಬಂಗೇರರವರ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ತರುವ ಕುರಿತು ನಿರ್ಣಯವನ್ನು ಕೈಗೊಳ್ಳಲಾಯಿತು.

ಕುಂದಾಪುರ ಜನಪರ ಪ್ರಗತಿಪರ ವೇದಿಕೆಯ ಸಂಚಾಲಕ, ಹಿರಿಯ ರಾಜಕಾರಣಿ ಮಾಣಿಗೋಪಾಲರವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಸಮಾನ ಮನಸ್ಕರಾದ ನಾವೆಲ್ಲರೂ ಒಟ್ಟಾಗಿ ಸಮಸ್ಯೆಗಳ ಕುರಿತು ಚಿಂತಿಸಿ ಚರ್ಚಿಸಿ ಹೋರಾಟ ನೀಡಿ ಸಮಸ್ಯೆ ಪರಿಹರಿಸಿಕೊಳ್ಳಲು ಇಂತಹ ವೇದಿಕೆಗಳ ಸ್ಥಾಪನೆಯ ಅಗತ್ಯದ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಜ.ಪ್ರ. ವೇದಿಕೆಯ ಸಹಸಂಚಾಲಕ ರಾಮಕೃಷ್ಣ ಹೇರ್ಳೆ, ಶ್ರೀಧರ ಆಚಾರ್ಯ, ಚಂದ್ರಶೇಖರ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಚೇರ್ಕಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಚೇರ್ಕಾಡಿ, ಐರೋಡಿ ಗ್ರಾ.ಪಂ. ಅಧ್ಯಕ್ಷ ಮೊಸೆಸ್ ರಾಡ್ರಿಗಸ್, ಹೆಗ್ಗುಂಜೆ ಗ್ರಾ.ಪಂ. ಅಧ್ಯಕ್ಷ ಗಣೇಶ್ ಶೆಟ್ಟಿ, ಕಾಡೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೋಟ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪಾರ್ವತಿ ಹಂದೆ, ಕೋಟ ಗ್ರಾಮ.ಪಂ. ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಗೋಪಾಲ ಬಂಗೇರ, ವಿನಯ ಕುಮಾರ್ ಕಬ್ಯಾಡಿ, ಭುಜಂಗ ಗುರ್ಕಾರ, ಗ್ರಾ.ಪಂ. ಸದಸ್ಯರಾದ ಪ್ರಥ್ವಿರಾಜ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಗಣೇಶ ಪೂಜಾರಿ, ಆವರ್ಸೆ ವಿಜಯ ಶೆಟ್ಟಿ, ಚಂದ್ರ ಪೂಜಾರಿ, ದಾಮೋದರ ಬಂಗೇರ, ನಾಗೇಶ್ ನಾಯಿರಿ, ನಾಗೇಂದ್ರ ಪುತ್ರನ್, ಮಹೇಶ ಶೆಟ್ಟಿ, ಶ್ರೀನಿವಾಸ ಐತಾಳ ಸಾಲಿಗ್ರಾಮ, ಜಯರಾಮ ಶೆಟ್ಟಿ ಕೋಟ, ಯುವ ಮುಂದಾಳುಗಳಾದ ಅಕ್ಷಯ್ ಹೆಗ್ಡೆ, ಪ್ರಮೋದ್ ನಾವುಂದ, ರೋಶನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ವೇದಿಕೆಯ ಮುಖಂಡ ಗೋಪಾಲ ಬಂಗೇರರವರು ಸ್ವಾಗತಿಸಿ ವಂದಿಸಿದರು.

Exit mobile version