ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ 201-16ರಲ್ಲಿ ಸಲ್ಲಿಸಿದ ಅನುಪಮ ಸೇವೆಯ ಹಿನ್ನಲೆಯಲ್ಲಿ 12 ಪ್ರಶಸ್ತಿಗಳನ್ನು ಪಡೆದು ಎಂಟು ಕಂದಾಯ ಜಿಲ್ಲೆಯನ್ನೊಳಗೊಂಡ 3180ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹಾಜರಾತಿಯಲ್ಲಿ ಪ್ರಥಮ, ರೋಟರಿ ಮಾಹಿತಿಯಲ್ಲಿ ಪ್ರಥಮ, ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಹಿತದೃಷ್ಠಿಯಿಂದ ಕೊಡಮಾಡಿದ ಇ-ಲರ್ನಿಂಗ್ ಕಿಟ್ ವಿತರಣೆ ವಿಭಾಗದಲ್ಲಿ ಸೇವೆಯನ್ನು ಪರಿಗಣಿಸಿ ರೋಟರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಪಡೆದುಕೊಂಡರು. ಅಲ್ಲದೇ ರೋಟರಿ ಜಿಲ್ಲೆಯ ಮದ್ಯಮ ವಿಭಾಗದ ಕ್ಲಬ್ ಮಟ್ಟದಲ್ಲಿ ಕ್ಲಬ್ ಸರ್ವಿಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಹೊಸ ದಾಖಲೆ ನಿರ್ಮಿಸಿದೆ. ಫೆಲೋಶಿಪ್‌ನಲ್ಲಿ ದ್ವಿತೀಯ, ಟೀಚರ್ ಸಪೋರ್ಟ್‌ನಲ್ಲಿ ದ್ವಿತೀಯ, ಪಬ್ಲಿಕ್ ರಿಲೇಶನ್ ಮತ್ತು ಪಬ್ಲಿಕ್ ಇಮೇಜ್, ಮ್ಯಾನೇಜ್‌ಮೆಂಟ್ ಆಫ್ ಕ್ಲಬ್ ಫೈನಾನ್ಸ್, ಕೇರಿಯರ್ ಗೈಡೆನ್ಸ್, ಅಂತರಾಷ್ಟ್ರೀಯ ರೋಟರಿ ಸಮ್ಮೇಳದಲ್ಲಿ ಭಾಗವಹಿಸುವಿಕೆ, ಡಿಸ್ಟ್ರಿಕ್ಟ್ ಗ್ರ್ಯಾಂಟ್ಸ್, ಇಂಟರ್‌ನ್ಯಾಶನಲ್ ಅಂಡರ್‌ಸ್ಟ್ಯಾಂಡಿಂಗ್‌ನಲ್ಲಿ ತೃತೀಯ ಸ್ಥಾನವನ್ನು ಪಡೆಯುವ ಮೂಲಕರೋಟರಿ ಜಿಲ್ಲೆ 3180 ಇದರ ಕೊನೆಯ ಅವಾರ್ಡ್ ನೈಟ್‌ನಲ್ಲಿ 12 ಪ್ರಶಸ್ತಿಗಳನ್ನು ಮೂಡಿಗೆರಿಸಿಕೊಂಡು ರೋಟರಿ ಸನ್‌ರೈಸ್ ಇತಿಹಾಸ ನಿರ್ಮಿಸಿದೆ.
ರೋಟರಿ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್, ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಢಾ. ಭಾಸ್ಕರ್ ಎಸ್., ಜಿಲ್ಲಾ ಕಾರ್ಯದರ್ಶಿ ಆಶಾ ಹೆಗ್ಡೆ, ಬಾಲಕೃಷ್ಣ ಮದ್ದೋಡಿ, ರೋಟರಿ ಸನ್‌ರೈಸ್ ನಿಯೋಜಿತ ಅಧ್ಯಕ್ಷ ನರಸಿಂಹ ಹೊಳ್ಳ, ಸ್ಥಾಪಕಾಧ್ಯಕ್ಷ ದಿನಕರ ಆರ್. ಶೆಟ್ಟಿ, ಅಬುಶೇಖ್ ಸಾಹೇಬ್, ಗಣೇಶ್ ಸಿ.ಎಚ್., ಬಿ.ಎಂ.ಚಂದ್ರಶೇಖರ, ಕಲ್ಪನಾ ಭಾಸ್ಕರ್ ಇನ್ನಿತರರು ಉಪಸ್ಥಿತರಿದ್ದರು.