Site icon Kundapra.com ಕುಂದಾಪ್ರ ಡಾಟ್ ಕಾಂ

ಬಡರೋಗಿಗಳ ಸಹಾಯಾರ್ಥ ಶಿವಾಜಿ ಟ್ರೋಫಿ: ಕುಂದಾಪುರದ ಚಾಲೆಂಜ್ ಕ್ರಿಕೆಟರ್ಸ್ ಗೆ ಗೆಲುವು

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಟಿ.ಟ. ರಸ್ತೆಯ ಶಿವಾಜಿ ಕ್ರಿಕೆಟರ‍್ಸ್ ಆಶ್ರಯದಲ್ಲಿ ಬಡ ರೋಗಿಗಳ ಸಹಾಯಾರ್ಥವಾಗಿ ಶಿವಾಜಿ ಟ್ರೋಫಿ ಕ್ರಿಕೆಟ ಪಂದ್ಯಾಟ ಗಾಂಧಿ ಮೈದಾನದಲ್ಲಿ ನಡೆಯಿತು.

ಕುಂದಾಪುರದ ಚಾಲೆಂಜ್ ಕ್ರಿಕೆಟರ‍್ಸ್ ಅಂತಿಮ ಪಂದ್ಯದಲ್ಲಿ ಜಾನ್ಸನ್ ತಂಡವನ್ನು ಸೋಲಿಸಿ ಪಶಸ್ತಿ ತನ್ನದಾಗಿಸಿಕೊಂಡಿತ್ತು. ಚಾಲೆಂಜ್ ತಂಡದ ನವೀನ ಉತ್ತಮ ಬ್ಯಾಟ್ಸiನ, ದಿನೇಶ ಮದ್ದುಗುಡ್ಡೆ ಉತ್ತಮ ಎಸೆತಗಾರ, ದಯಾನಂದ ಉತ್ತಮ ಗೂಟರಕ್ಷಕ ಹಾಗೂ ಜಾನ್ಸನ ತಂಡದ ಅನಿಲ್ ಸರಣಿ ಶೇಷ್ಟರಾಗಿ ಮೂಡಿಬಂದರು.

ಯೋಗಗುರು ರಘುವೀರ ನಗರಕರ, ಸಂಚಾರಿ ಠಾಣೆಯ ಠಾಣಾಧಿಕಾರಿ ಕೆ.ಜಯ, ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್ ನಾಯ್ಕ, ಉದ್ಯಮಿ ಧರ್ಮಪ್ರಕಾಶ, ಪತ್ರಕರ್ತರಾದ ನಾಗರಾಜ್ ರಾಯಪ್ಪನಮಠ, ಸಂಸ್ಥೆಯ ಗೌರವಾದ್ಯಕ್ಷರಾದ ರಾಜು ಪೂಜಾರಿ ಕೈಪಾಡಿ, ಅದ್ಯಕ್ಷರಾದ ರಾಜು ದೇವಾಡಿಗ ಬಹುಮಾನ ವಿತರಿಸಿದರು. ರಾಘವೇಂದ್ರ ದೇವಾಡಿಗ ಆನಗಳ್ಳಿ ಕಾರ್ಯಕ್ರಮ ನಿರೂಪಿಸಿದರು.

Exit mobile version