Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಇನೋವಾ ಕಾರು ಡಿಕ್ಕಿ. ಅರ್ಚಕನ ದಾರುಣ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಅಂಕದಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ 66ರಲ್ಲಿ ಮುಂಜಾನೆ ನಡೆದ ಅಫಘಾತದಲ್ಲಿ ಕುಂದೇಶ್ವರ ದೇವಳದ ಅರ್ಚಕ ಕೋಟೇಶ್ವರದ ಉಮೇಶ್ ಮಂಜ (54) ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಉಡುಪಿಯಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಕೇರಳ ನೊಂದಣಿಯ ಇನೋವಾ ಕಾರೊಂದು ಅದೇ ಮಾರ್ಗವಾಗಿ ಮುಂಜಾನೆಯ ವೇಳೆಗೆ ಕೋಟೇಶ್ವರದಿಂದ ಕುಂದಾಪುರ ದೇವಸ್ಥಾನಕ್ಕೆ ನಡೆದು ಬರುತ್ತಿದ್ದ ಅರ್ಚಕ ಉಮೇಶ್ ಮಂಜ ಅವರಿಗೆ ಅಂಕದಕಟ್ಟೆ ಹೆದ್ದಾರಿಯ ಬದಿಯಲ್ಲಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅರ್ಚಕರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನೋವಾ ಕಾರು ಸಮೇತರಾಗಿ ಚಾಲಕ ಅಲ್ಲಿಂದ ತೆರಳಿ ಹೆಮ್ಮಾಡಿಯ ಗ್ಯಾರೇಜ್‌ವೊಂದರಲ್ಲಿ ರಿಪೇರಿಗೆ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಫಘಾತದ ಸಂದರ್ಭದಲ್ಲಿ ಬಿದ್ದಿದ್ದ ಇನೋವಾ ಕಾರಿನ ತುಣುಕಿನ ಆಧಾರದಲ್ಲಿ ವಾಹನವನ್ನು ಪತ್ತೆಹಚ್ಚಲಾಗಿಯಿತು. ಕುಂದೇಶ್ವರ ದೇವಳದಲ್ಲಿ ಅರ್ಚಕ ಹಾಗೂ ಜ್ಯೋಷಿತಿಯಾಗಿದ್ದ ಉಮೇಶ್ ಮಂಜ ಅವರು ಪತ್ನಿ ಹಾಗೂ ಈರ್ವ ಮಕ್ಕಳನ್ನು ಅಗಲಿದ್ದಾರೆ.

Exit mobile version