Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿಗೆ 85% ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, 85% ಫತಿತಾಂಶ ದಾಖಲಾಗಿದೆ. ಪರಿಕ್ಷೇಗೆ ಹಾಜರಾದ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಒಟ್ಟು 475 ವಿದ್ಯಾರ್ಥಿಗಳ ಪೈಕಿ, 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 256 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 87 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.  ವಿಶಿಷ್ಟ ಸಾಧನೆಗೈದ ಕಾಲೇಜಿಗೆ ಅಗ್ರಸ್ಥಾನಿ ವಿದ್ಯಾರ್ಥಿಗಳಾದ ಶರತ್ ಪಿ. 570 ರಮ್ಯಾ 568, ಎ. ನವ್ಯ 561, ದೇವರಾಜ್ 561 ರಾಜೇಶ್ ಪೂಜಾರಿ 560 ಅಂಕ ಪಡೆದಿದ್ದಾರೆ.

Exit mobile version