Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಹಿರಿಯ ಕಾಂಗ್ರೇಸಿಗ ಕಕ್ಕುಂಜೆ ರಾಧಾಕೃಷ್ಣ ಅಡಿಗ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪ್ರಗತಿಪರ ಕೃಷಿಕ ಹಿರಿಯ ಕಾಂಗ್ರೇಸಿಗ ಕಕ್ಕುಂಜೆ ರಾಧಾಕೃಷ್ಣ ಅಡಿಗ (77) ರವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಮಾರು ನಾಲ್ಕು ಅವಧಿಗೆ ಕುಂದಾಪುರ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿಯಾಗಿ, ಎ.ಪಿ.ಯಂ.ಸಿ ಅಧ್ಯಕ್ಷರಾಗಿ, ರಿಕ್ಷಾ-ಟ್ಯಾಕ್ಸಿ-ಮೆಟಾಡೋರ್ ಯೂನಿಯನ್ ಅಧ್ಯಕ್ಷರಾಗಿ ತೆಂಗಿನ ನಾರು ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅಡಿಗರು ಉತ್ತಮ ಕ್ರೀಡಾಪಟುವಾಗಿದ್ದರು. ಮೃತರು ಪತ್ನಿ ಶ್ರೀಮತಿ ರಾಣಿ ಅಡಿಗ ಸಹಿತ ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ.

ಅಡಿಗರ ನಿಧನದ ಕುರಿತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಜನಾರ್ದನ್ ಪೂಜಾರಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಗರ ಪ್ರಾಧಿಕಾರದ ಅಧ್ಯಕ್ಷ ಜಾಕೋಬ್ ಡಿಸೋಜ, ಹಿರಿಯ ಕಾಂಗ್ರೇಸಿಗ ಕೃಷ್ಣದೇವ ಕಾರಂತ, ಯುವ ಮುಖಂಡ ಮೊಳಹಳ್ಳಿ ಮಹೇಶ್ ಹೆಗ್ಡೆ, ಜನಪರ ಪ್ರಗತಿಪರ ವೇದಿಕೆಯ ಸಂಚಾಲಕ ಮಾಣಿ ಗೋಪಾಲ್, ಚಂದ್ರಶೇಖರ ಶೆಟ್ಟಿ, ವಿನೋದ್ ಕ್ರಾಸ್ತಾ, ಕೆ.ಎನ್.ನಾಗರಾಜ್, ಕೃಷ್ಣ ಮೊಗವೀರ, ಉದ್ಯಮಿ ಸಟ್ವಾಡಿ ವಿಜಯ ಶೆಟ್ಟಿ ಮುಂತಾದವರು ಅಂತಿಮ ನಮನ ಸಲ್ಲಿಸಿದರು.

Exit mobile version