Site icon Kundapra.com ಕುಂದಾಪ್ರ ಡಾಟ್ ಕಾಂ

ಬಳ್ಕೂರು: ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನು ಸ್ವಂತ ಮಗನೇ ದಾರುಣವಾಗಿ ಕೊಂದು ಮಲಗಿಸಿದ ಘಟನೆ ತಾಲೂಕಿನ ಬಳ್ಕೂರಿನಲ್ಲಿ ನಡೆದಿದೆ. ಇಲ್ಲಿನ ಹಳೆಮನೆಹಿತ್ಲು ನಿವಾಸಿ ಸಾಧು ಪೂಜಾರ್ತಿ(68) ಕೊಲೆಯಾದ ವೃದ್ಧ ಮಹಿಳೆ. ಆಕೆಯ ಮಗ ರಾಮ ಪೂಜಾರಿ(41) ಕುಡಿದ ಅಮಲಿನಲ್ಲಿ ತಾಯಿಯನ್ನು ಕೊಲೆಗೈದ ಅಸಾಮಿ.

ವಿಪರೀತ ಕುಡಿತದ ಚಟ ಹೊಂದಿದ್ದ ರಾಮ ಪೂಜಾರಿ ಪ್ರತಿನಿತ್ಯ ಕುಡಿದು ಬಂದು ಮನೆಯವರಲ್ಲಿ ಜಗಳ ತೆಗೆಯುತ್ತಿದ್ದ. ಸಾಧು ಪೂಜಾರ್ತಿ ಅವರ ಪತಿ ಅಣ್ಣಯ್ಯ ಪೂಜಾರಿ ಈ ಹಿಂದೆಯೇ ತೀರಿಕೊಂಡಿದ್ದರು. ಮಗ ರಾಮ ಪೂಜಾರಿಯ ತೊಂದರೆ ತಾಳಲಾದರೆ ಇನ್ನೊರ್ವ ಮಗ ಮದುವೆಯ ಬಳಿ ಬೇರೆಯೇ ವಾಸಿಸುತ್ತಿದ್ದರೇ, ಮಗಳು ಮದುವೆಯಾಗಿ ಬೇರೆಡೆ ಇದ್ದರು. ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ರಾಮ ಪೂಜಾರಿ ಪತ್ನಿ ಹಾಗೂ ಮಕ್ಕಳನ್ನು ತೊರೆದು ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ಶುಕ್ರವಾರ ರಾತ್ರಿ ಮನೆಗೆ ಬಂದವನು ಎಂದಿನಂತೆ ತಾಯಿಯ ಬಳಿ ಜಗಳ ಶುರುವಿಟ್ಟುಕೊಂಡಿದ್ದು ಅದು ತಾರರಕ್ಕೇರಿ ಮನೆಯಲ್ಲಿದ್ದ ಕತ್ತಿಯಿಂದ ಆಕೆಯ ಕುತ್ತಿಗೆಯ ಭಾಗಕ್ಕ ಕಡೆದು ಕೊಲೆಗೈದಿದ್ದಾನೆ.

ಮರುದಿನ ಬೆಳಿಗ್ಗೆ ಆಕೆಯನ್ನು ಕೊಲೆಗೈದಿರುವ ಬಗ್ಗೆ ಅಲ್ಲಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರೂ, ಮೊದಲ ಕುಡಿದ ಅಮಲಿನಲ್ಲಿದ್ದ ಆತನ ಮಾತನ್ನು ಯಾರೂ ನಂಬಿರಲಿಲ್ಲ. ಕೊನೆಗೆ ಆಕೆಯ ಅಳಿಕೆ ಮನೆಗೆ ಬಂದು ನೋಡುವಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಎಸೈ ನಾಸಿರ್ ಹುಸೇನ್ ಭೇಟಿ ಪರಿಶೀಲಿಸಿದ್ದಾರೆ.

Exit mobile version