Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭೆ ಸಾಮಾನ್ಯ ಸಭೆ: ರಸ್ತೆ, ಯುಜಿಡಿ ಯೋಜನೆ ಬಗ್ಗೆ ಚರ್ಚೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಮಹತ್ವಾಕಾಂಕ್ಷಿ ಯುಡಿಜಿ ಯೋಜನೆಯಲ್ಲಿ ಒಳ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಯೋಜನೆ ಸಾಧಕ, ಬಾಧಕಗಳೇನು. ಮಳೆಗಾದಲ್ಲಿ ರಸ್ತೆ ಕಟ್ಟಿಂಗ್ ಮಾಡಿದರೆ ಸಮಸ್ಯೆ ಆಗುತ್ತದೆ. ಯುಡಿಜಿ ಯೋಜನೆ ಸಂಪೂರ್ಣ ಮಾಹಿತಿ ನೀಡಿವಂತೆ ಸದಸ್ಯ ಮೋಹನದಾಸ್ ಶೆಣೈ ಪ್ರಶ್ನಿಸಿದರು.

ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದು ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಅವರು ಮಾತನಾಡಿದರು. ಪುರಸಭಾ ಸದಸ್ಯ ಕುಂದಾಪುರ ಪ್ರಮುಖ ಜನದಟ್ಟಣೆ ಪ್ರದೇಶವಾದ ಖಾರ್ವಿಕೇರಿಯಲ್ಲಿ ರಿಂಗ್ ರಸ್ತೆ ಹಾದು ಹೋಗಿದ್ದು ಯುಡಿಜಿ ಯೋಜನೆಯಿಂದ ಹೊರತು ಪಡಿಸಲಾಗಿದೆ. ಯೋಜನೆ ಅಧಿಕಾರಿಗಳ ಕೇಳಿದರೆ ಮತ್ತೆ ಸೇರಿಸುವ ಎನ್ನುವ ಉಡಾಪೆ ಉತ್ತರ ಸಿಗುತ್ತದೆ. ಯುಡಿಬಿ ಯೋಜನೆ ಫಲಾನುಭವಿ ಪಟ್ಟಿಯಿಂದ ಖಾರ್ವಿಕೇರಿ ಹೊರಗಿಟ್ಟಿದ್ದೇಕೆ. ಖಾರ್ವಿಕೇರಿ ಕೂಡಾ ಯುಡಿಬಿ ಯೋಜನೆಗೆ ಸೇರಬೇಕು ಎಂದರು.

ಕುಂದಾಪುರ ಪುರಸಭೆ ಎದುರು ರಸ್ತೆ ವಿವಾದ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ವಕ್ಫ ಮಂಡಳಿಗೆ ಜಾಗ ಬಿಟ್ಟು ಕೊಡುವಂತೆ ಮನವಿ ಮಾಡಬೇಕು. ಹಾಗೆ ನಗರಸಭೆ ಜಾಗವಲ್ಲದೆ ವಕ್ಫ ಮಂಡಳಿಗೆ ಸಂಬಂಧಪಟ್ಟ ಜಾಗವಿದ್ದರೆ, ಅವರಿಗೆ ಬೇರೆ ಸ್ಥಳ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಕೇಳಿಕೊಳ್ಳಬೇಕು. ಕುಂದಾಪುರ ಪುರಸಭೆ ಎದುರು ರಸ್ತೆ ಸಂಚಾರ ದೃಷ್ಟಿಯಲ್ಲಿ ಪ್ರಾಮುಖ್ಯವಾಗಿದ್ದು, ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಸಲಹೆ ಮಾಡಿದರು.

ಇದಕ್ಕೆ ದ್ವನಿ ಸೇರಿಸಿದ ರವಿರಾಜ್ ಖಾರ್ವಿ, ವಿಠಲ ಕುಂದರ್, ಸತೀಶ್ ಶೆಟ್ಟಿ ಮಾತನಾಡಿ, ಮಾಸ್ತಕಟ್ಟೆ ರಸ್ತೆ ಏಕಮುಖ ಸಂಚಾರವಾಗಿ ಬದಲಾಗಿದ್ದು ಪುರಸಭೆ ಎದುರಿನ ರಸ್ತೆ ಪ್ರಾಮುಖ್ಯತೆ ಪಡೆದಕೊಂಡಿದೆ. ಕುಂದಾಪುರ ವಾಹನ ದಟ್ಟಣೆ ನಿವಾರಣೆಗೆ ರಸ್ತೆ ಅಭಿವೃದ್ಧಿ ಪೂರಕ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪ್ರಭಾಕರ ಕೋಡಿ, ಶ್ರೀಧರ ಶೇರುಗಾರ್, ದೇವಕಿ ಸಣ್ಣಯ್ಯ, ಪುಷ್ಟ ಶೇಟ್, ಚಂದ್ರಶೇಖರ ಖಾರ್ವಿ , ವಿಜಯ ಪೂಜಾರಿ, ಉದಯ ಮೆಂಡನ್ ಸಭೆಯಲ್ಲಿ ಮಾತನಾಡಿದರು. ಪ್ಲಾಸ್ಕಿಕ್ ನಿಷೇಧ, ಪ್ಲೆಕ್ಸ್ ತೆರವು, ಪ್ಲಾಸಿಕ್ ಮಾರಾಟ ವಿರುದ್ಧ ಕ್ರಮ ಮುಂತಾದ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Exit mobile version