Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ವಿಘೇಶ್ವರ ಯುವಕ ಸಂಘದ ರಜತ ಸಂಭ್ರಮ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಟಿ.ಟಿ.ರಸ್ತೆ ಶೀ ವಿಘೇಶ್ವರ ಯುವಕ ಸಂಘದ ರಜತ ಸಂಭ್ರಮ ಸಮಾರಂಭ ಕುಂದಾಪುರ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಿತು. ಮುಂಬ್ಮಯಿ ಉದ್ಯಮಿ ಸುರೇಶ ಡಿ.ಪಡುಕೋಣೆ ಕಾರ್ಯಕ್ರಮ ಉದ್ಘಾಟಿಸಿ
ಶುಭಹಾರೈಸಿದರು.

ಸಮಾರಂಭದ ಅದ್ಯಕ್ಷತೆಯನ್ನು ಪುರಸಭೆಯ ಅದ್ಯಕ್ಷರಾದ ವಸಂತಿ ಮೋಹನ ಸಾರಂಗ ವಹಿಸಿದ್ದರು. ಮುಖ್ಯತಿಧಿಗಳಾಗಿ ಕಲಾಕ್ಷೇತ್ರ ಕುಂದಾಪುರ ಬಿ. ಕಿಶೋರ ಕುಮಾರ, ಸಹನಾ ಕನ್ವೆನ್ಷನ್ ಸೆಂಟರ್ ಅಂಕದಕಟ್ಟೆಯ ಸುರೇಂದ್ರಶೆಟ್ಟಿ, ಬಿಲಿಂಡರ್ ಚಲನಚಿತ್ರ ತಂಡದ ಓಂಗುರು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾಯದರ್ಶಿ ನಾಗರಾಜ ರಾಯಪ್ಪನಮಠ, ಸಂಸ್ಧೆಯ ಗೌರವಾದ್ಯಕ್ಷ ಶಿವಾನಂದ ವೇದಿಕೆಯಲ್ಲಿ ಉಪಸ್ಧಿತರಿದ್ದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಸಾಹಸಿಗ ಜೋತಿರಾಜ್, ಭಾರತೀಯ ಸೇನೆಯ ರಾಜೇಶ ದಾರಿಮನೆ, ಬಿಲಿಂಡರ್ ಚಿತ್ರ ತಂಡವನ್ನು ಹಾಗೂ ರಾಷ್ಟ್ರ ಮಟ್ಟದ ವಾಲ್ ಕ್ಲೈಮಿಂಗ್ ಸ್ಪರ್ದೆಯ ಚಿನ್ನದ ಪದಕ ವಿಜೇತ ಅರ್ಜುನ ಇವರನ್ನು ಸನ್ಮಾನಿಸಲಾಯಿತು. ಸಂಸ್ಧೆಯ ಅದ್ಯಕ್ಷ ಕೃಷ್ಣ ದೇವಾಡಿಗ ಸ್ವಾಗತಿಸಿದರು. ಮಾಜಿ ಅದ್ಯಕ್ಷ ದಿನೇಶ ದೇವಾಡಿಗ ಸನ್ಮಾನಿತರ ಪರಿಚಯ ಮಾಡಿದರು. ಗುರುರಾಜ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

Exit mobile version