Kundapra.com ಕುಂದಾಪ್ರ ಡಾಟ್ ಕಾಂ

ದುಬೈ: ದ್ವಿತೀಯ ಪಿಯುಸಿಯಲ್ಲಿ ಬೈಂದೂರು ನಾಯ್ಕನಕಟ್ಟೆಯ ಹುಡುಗಿ ಟಾಪರ್

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ದುಬೈನ ಭಾರತೀಯ ವಿದ್ಯಾಸಂಸ್ಥೆ ಏಷಿಯನ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ನಾಯ್ಕನಕಟ್ಟೆ ಮೂಲದ ಸ್ವಾತಿ ಪೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ದುಬೈನಲ್ಲಿ ದ್ವಿತೀಯ ಪಿಯುಸಿ ಕಲಿತವರಲ್ಲಿ ಟಾಪರ್ ಆಗಿದ್ದಾರೆ. ಇದರೊಂದಿಗೆ ಬಯೋಲಜಿಯಲ್ಲಿ ಶೇ.100 ಅಂಕಗಳಿಸಿದ್ದು, ಚಿನ್ನದ ಪದಕನ್ನೂ ಪಡೆದಿದ್ದಾರೆ.

ಕೆರ್ಗಾಲು ಗ್ರಾಮದ ಬೈಲ್‌ಕೆರೆಯ ಗಣೇಶ್ ಪೈ ಹಾಗೂ ಜ್ಯೋತಿ ಜಿ. ಪೈ ಪುತ್ರಿಯಾದ ಸ್ವಾತಿ ಕರ್ನಾಟಕದಲ್ಲಿ ಸಿಇಟಿ ವೈದ್ಯಕೀಯ ಪರೀಕ್ಷೆಯ 1463ನೇ ರ‍್ಯಾಂಕ್ ಪಡೆದಿದ್ದಾರೆ. ಸ್ವಾತಿ ಅವರ ತಂದೆ ಕಳೆದ 15 ವರ್ಷಗಳಿಂದ ದುಬೈನ ನೆಸ್ಲೆ ಕಂಪೆನಿಯ ಉದ್ಯೋಗಿಯಾಗಿದ್ದು, ಕುಟುಂಬವೂ ಅವರೊಂದಿಗೆ ವಾಸವಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version