Site icon Kundapra.com ಕುಂದಾಪ್ರ ಡಾಟ್ ಕಾಂ

ಎಲ್‌ಐಸಿ ಡೆವಲಪ್‌ಮೆಂಟ್ ಆಫೀಸರ್ ಕರುಣಾಕರ ಶೆಟ್ಟರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯಲ್ಲಿ ಸುಧೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಅಭಿವೃದ್ಧಿ ಅಧಿಕಾರಿ ಕರುಣಾಕರ ಶೆಟ್ಟಿಯವರಿಗೆ ನಿವೃತ್ತಿ ಜೀವನಕ್ಕೆ ಶುಭ ಕೋರಿ ಬೀಳ್ಕೊಡುಗೆ ನಡೆಸಲಾಯಿತು.

ಭಾರತೀಯ ಜೀವ ವಿಮಾ ನಿಗಮದ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೆ.ವಿ. ಕುಲಕರ್ಣಿ ಅವರು ಕೆ. ಕರುಣಾಕರ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿ, ಭಾರತೀಯ ಜೀವ ವಿಮಾ ನಿಗಮಕ್ಕೆ ನೀಡಿದ ಸೇವೆಯನ್ನು ಪ್ರಶಂಸಿದರು. ಎಡಿಎಂ ಸುರೇಶ್ ಬಾಬು, ಉಪ ಶಾಖಾಧಿಕಾರಿ ಗುರುರಾಜ್, ಅಭಿವೃದ್ಧಿ ಅಧಿಕಾರಿಗಳಾದ ಗಣೇಶ್ ಅಡಿಗ, ವಿವೇಕ್ ನಾಯಕ್ ಕೆ.ಜಿ. ರಾಜೇಶ್ ನಿವೃತ್ತರನ್ನು ಅಭಿನಂದಿಸಿ ಮಾತನಾಡಿದರು. ಶ್ರೀಮತಿ ರತ್ಯಾ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಗಿರಿಧರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಅರಸ್ ವಂದಿಸಿದರು.

Exit mobile version