Kundapra.com ಕುಂದಾಪ್ರ ಡಾಟ್ ಕಾಂ

ದುಬೈ ಕುಂದಾಪುರ ದೇವಾಡಿಗ ಮಿತ್ರ ಸಂಘಟನೆಯ ರಕ್ತದಾನ ಶಿಬಿರ ಯಶಸ್ವಿ

ರೋಹಿತ್ | ಕುಂದಾಪ್ರ ಡಾಟ್ ಕಾಂ ಸುದ್ದಿ.
ದುಬೈ: ಕುಂದಾಪುರ ದೇವಾಡಿಗ ಮಿತ್ರ ದುಬೈ (ಕದಂ) ಸಂಘಟನೆಯು ಪವಿತ್ರ ರಂಜಾನ್ ತಿಂಗಳ ಅಂಗವಾಗಿ ದುಬೈ ಲತೀಫ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ದುಬೈ ಕುಂದಾಪುರ ದೇವಾಡಿಗ ಮಿತ್ರ ಸಂಘಟನೆಯ ಅಧ್ಯಕ್ಷ ದಿನೇಶ್ ಸಿ.ಡಿ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು ಹಾಗೂ ಅತಿಥಿಗಳು ಉಪಸ್ಥಿತರಿದ್ದರು. ಸುಮಾರು 85ಕ್ಕೂ ಅಧಿಕ ರಕ್ತದಾನಿಗಳು ಶಿಬಿರದಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ರಕ್ತದಾನ ಮಾಡಿದರು.

ದುಬೈ ಯುಎಇಯಲ್ಲಿ ನೆಲೆಸಿರುವ ಕುಂದಾಪುರ ಮೂಲದ ದೇವಾಡಿಗ ಸಮುದಾಯದವರು ಕಟ್ಟಿಕೊಂಡ ಕದಂ ಸಂಘಟನೆ ವರ್ಷಂಪ್ರತಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿದೆ.

Kundapura devadiga mirtra Dubai - KADAM - Blood donation camp (2)

Exit mobile version