ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೀಪದ ಬಿಜೂರು ರಾ.ಹೆ-66ರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ಖಾಸಗಿ ಬಸ್ಸು, ಮಾರುತಿ ಸುಜುಕಿ, ಟಾಟಾ ಇಂಡಿಕಾ ಕಾರು ಹಾಗೂ ಬೊಲೆರೋ ವಾಹನ ಒಂದಕ್ಕೊಂದು ಢಿಕ್ಕಿ ಹೊಡೆದಿರುವುದಲ್ಲದೇ ಮೂರು ವಾಹನಗಳು ಜಖಂಗೊಂಡ ಘಟನೆ ನಡೆದಿದೆ. ಬಸ್ ಹಾಗೂ ಎಲ್ಲಾ ವಾಹನದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂದೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಬಿಜೂರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದಾಗ ಬಸ್ಸಿನ ಹಿಂದೆಯೇ ಇದ್ದ ಬಳ್ಳಾಪುರದಿಂದ ಬರುತ್ತಿದ್ದ ಮಾರುತಿ ಸುಜುಕಿ ಕಾರಿನ ಚಾಲಕ ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಇದರ ಹಿಂದೆಯೇ ಇದ್ದ ಟಾಟಾ ಇಂಡಿಕಾ ಮುಂದಿನ ಕಾರಿಗೆ ಡಿಕ್ಕಿ ಹೊಡೆಯಿತು ಪರಿಣಾಮ ಮಾರುತಿ ಸುಜುಕಿ ಕಾರು ಕೂಡಾ ನಿಂತಿದ್ದ ಬಸ್ಸಿಗೆ ಡಿಕ್ಕಿಹೊಡೆದಿತ್ತು., ಇದೇ ವೇಳೆ ಇಂಡಿಯಾ ಕಾರಿನ ಹಿಂದಿದ್ದ ಬುಲೇರೋ ವಾಹನವೂ ಡಿಕ್ಕಿ ಹೊಡೆದು ಮೂರು ವಾಹನಗಳು ಜಖಂಗೊಂಡಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ಸು ಹಾಗೂ ಲೋಕಲ್ ಬಸ್ಸಿನ ಕೆಲವು ಚಾಲಕರು ಮುಸ್ಸೂಚನೆ ನೀಡದೇ ಏಕಾಏಕಿ ರಸ್ತೆಯ ಮೇಲೆಯೇ ವಾಹನಗಳನ್ನು ನಿಲ್ಲಿಸುವುದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಅಪಘಾತಗಳಿಗೆ ದಾರಿಮಾಡಿಕೊಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನಾಗೂರಿನಲ್ಲಿ ಸರಣಿ ಅಫಘಾತ ನಡೆದಿತ್ತು.
Read this:
► ನಾಗೂರಿನಲ್ಲಿ ಸರಣಿ ಅಫಘಾತ: ನಾಲ್ಕು ವಾಹನಗಳು ಜಖಂ. ಪ್ರಯಾಣಿಕರು ಸೇಫ್ – http://kundapraa.com/?p=14749 .