Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ಹಾಡುಹಗಲೇ ಮುಸ್ಲಿಂ ಕೇರಿಯ ಮನೆಯೊಂದರಲ್ಲಿ ಕಳ್ಳತನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೀಪದ ಶಿರೂರು ಗ್ರಾಪಂ ವ್ಯಾಪ್ತಿಯ ಮುಸ್ಲಿಂ ಕೇರಿಯ ಮನೆಯೊಂದರಲ್ಲಿ ಹಾಡುಗಲೇ ಕಳ್ಳತನಗೈದ ಘಟನೆ ಬೆಳಕಿಗೆ ಬಂದಿದೆ.

ಮುಸ್ಲಿಂ ಕೇರಿಯ ಮುಲ್ಲಾ ದಸ್ತಗಿರಿ ಕುಟುಂಬದವರಿಗೆ ಸೇರಿದ ಮನೆಯಾಗಿದ್ದು, ಯಜಮಾನ ಸೇರಿದಂತೆ ಕುಟುಂಬದ ಸದಸ್ಯರು ವಿದೇಶದಲ್ಲಿ ನೆಲೆಸಿದ್ದಾರೆ. ಇಲ್ಲಿ ಬೇರೊಬ್ಬರು ಮನೆಯನ್ನು ನೋಡಿಕೊಳ್ಳುತ್ತಿದ್ದು, ಅವರು ಬೀಗ ಹಾಕಿ ತೆರಳಿದ್ದಾಗ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಎರಡು ಬೀರುವಿನ ಬಾಗಿಲು ಮುರಿದು ಚಿನ್ನ ಇಲ್ಲವೇ ಹಣಕ್ಕಾಗಿ ತಡಕಾಡಿರಬಹುದು ಎಂದು ಶಂಕಿಸಲಾಗಿದೆ. ಕೋಣೆಯ ತುಂಬಿಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಳವಾದ ವಸ್ತು ಹಾಗೂ ಮೌಲ್ಯದ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

 Shiruru Muslim keri home theft (2)

Exit mobile version