Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಹೋಲಿ ರೋಜರಿ ಚರ್ಚಿಗೆ ಉಡುಪಿ ಧರ್ಮಗುರು ಅಧಿಕೃತ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ವಂ| ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಅಧಿಕೃತವಾಗಿ ಕುಂದಾಪುರ ಹೋಲಿ ರೋಜರಿ ಚರ್ಚ್ಗೆ ಭೇಟಿ ನೀಡಿದರು. ಪ್ರಾರ್ಥನ ವಿಧಿ ನೆರವೇರಿಸಿ ಮಾತನಾಡಿದ ಅವರು, ದೇವರು ನಮ್ಮನ್ನು ಸೃಷ್ಟಿಸಿದ್ದು ಇಲ್ಲಿ ನೀತಿವಂತರಾಗಿ ಬಾಳುವಂತೆ. ಪ್ರಾಪಂಚಿಕವಾದ ಹಣ ಆಸ್ತಿ, ಚಿನ್ನಾಭರಣಗಳನ್ನು ಕೂಡಿಟ್ಟರೆ ಸಾಲದು, ಸತ್ಯ ನೀತಿಯಿಂದ ಜೀವಿಸುತ್ತಾ, ದಯಾಪರ ಕೆಲಸಗಳನ್ನು ಮಾಡುತ್ತ ಪುಣ್ಯವನ್ನು ಸಂಪಾದಿಸಿಕೊಳ್ಳಬೇಕಿದೆ. ಅದುವೇ ನಿಮ್ಮನ್ನು ಸ್ವರ್ಗರಾಜ್ಯಕ್ಕೆ ಕೊಂಡಯುವುದು ಎಂದು ಅವರು ಸಂದೇಶ ನೀಡಿದರು

ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಬಿಶಪರಿಗೆ ಬೆಳಗಿಸದ ಮುಂಬತ್ತಿ ಹಾಗೂ ಶಿಲುಬೆಯನ್ನು ನೀಡಿ ಗೌರವಿಸಿದರು. ಬಳಿಕ ಹಲವಾರು ಪ್ರಾರ್ಥನ ವಿಧಿಗಳನ್ನು ನೆಡಸಲಾಯಿತು. ಕೊನೆಗೆ ಬಿಶಪರು ಧರ್ಮಕೇಂದ್ರದ ಸಮಾಧಿಗೆ ಭೇಟಿ ಮಾಡಿ ಅಲ್ಲಿ ಸಮಾಧಿ ಮಾಡಿದವರಿಗೆ ಮುಕ್ತಿ ದೊರಕಲು ಪವಿತ್ರ ಜಲವನ್ನು ಪ್ರೋಕ್ಷಿಸಿ, ವಿಶೇಷವಾದ ಪ್ರಾರ್ಥನೆಯನ್ನು ಸಲ್ಲಿಸಿ ಅಶಿರ್ವದಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ| ಜೆರಾಲ್ಡ್ ಸಂದೀಪ್ ಡಿಸೋಜಾ, ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್ ಅಮ್ರತ್ ಮಾರ್ಟಿಸ್, ಹಲವಾರು ಧರ್ಮ ಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ ಜಾನ್ಸನ್ ಆಲ್ಮೇಡಾ, ಸದಸ್ಯರು ಹಾಗೂ ಹಲವಾರು ಭಕ್ತಾಧಿಗಳು ಹಾಜರಿದ್ದರು.

News bishap visited kundapura holly rosary church

Exit mobile version