Site icon Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ರಿಕ್ಷಾ ಮಗುಚಿ ಓರ್ವ ಮೃತ. ಐವರಿಗೆ ಗಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿಗೆ ಸಮೀಪದ ಶಿರೂರಿನಿಂದ ತೂದಳ್ಳಿಗೆ ತೆರಳುವ ರಸ್ತೆಯ ಆಲಂದೂರು ಕನ್ನದ ಬಾಗಿಲಿನ ತಿರುವಿನಲ್ಲಿ ಆಟೋ ರಿಕ್ಷವೊಂದು ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು ಐವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಯಡ್ತರೆ ಗ್ರಾಮದ ಹೊಸೂರಿನ ರಾಮ ಮರಾಠಿ ಮೃತಪಟ್ಟಿದ್ದು, ಸಂಕ್ರಪ್ಪ, ಚೇತನ, ನಾಗರತ್ನ, ಸೀತು ಮರಾಠಿ ಹಾಗೂ ವಿಜಯ ಎಂಬುವವರು ಗಾಯಗೊಂಡಿದ್ದಾರೆ.

ಕನ್ನದ ಬಾಗಿಲು ತಿರುವಿನಲ್ಲಿ ವೇಗವಾಗಿ ಬಂದ ರಿಕ್ಷ ಒಂದೇ ಸಮಗೆ ತಿರುಗಿಸಿದಾಗ ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಮೋರಿಯ ಕಟ್ಟೆಗೆ ಡಿಕ್ಕಿಯಾಗಿ ಪಲ್ಟಿ ಹೊಡೆದು ನೀರಿನ ತೋಡಿಗೆ ಬಿದ್ದಿತ್ತು. ಅಫಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಾಮ ಮರಾಠಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗಿ ಮೃತಪಟ್ಟಿದ್ದರು.

Exit mobile version