Site icon Kundapra.com ಕುಂದಾಪ್ರ ಡಾಟ್ ಕಾಂ

ಮೃತ ಮಕ್ಕಳ ಗೌರವಾರ್ಥ ಹೆಮ್ಮಾಡಿಯಲ್ಲಿ ಸ್ವಯಂಪ್ರೇರಿತ ಬಂದ್

?????????????

ಮುಳ್ಳಿಕಟ್ಟೆ, ತ್ರಾಸಿಯಲ್ಲಿ ಸ್ವಯಂಪ್ರೇರಿತ ಬಂದ್ ಸಾಧ್ಯತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳವಾರ ನಡೆದ ಭೀಕರ ಅಫಘಾತದಲ್ಲಿ ಹೆಮ್ಮಾಡಿ ಪರಿಸರದ ೮ ಮಕ್ಕಳು ಮೃತರಾಗಿದ್ದು ಇಡಿ ಊರೇ ಶೋಕಸಾಗರದಲ್ಲಿ ಮುಳುಗಿದೆ. ಮೃತ ಮಕ್ಕಳ ಗೌರವಾರ್ಥ ಹೆಮ್ಮಾಡಿ ಪೇಟೆ ಅಂಗಡಿ ಮುಂಗಟ್ಟು ಮುಚ್ಚಿ ಗೌರವ ಸಲ್ಲಿಸಲಾಯಿತು.

ಕಟ್‌ಬೇಲ್ತೂರು ಲಾಯ್ಡ್ ಡಿಸಿಲ್ವಾ ಅವರ ಮಕ್ಕಳಾದ ನಿಖಿತ ಮತ್ತು ಅನನ್ಯ, ಹೆಮ್ಮಾಡಿ ಸಮೀಪ ಮೂವತ್ತಮುಡಿ ಸ್ಟೀವನ್ ಒಲಿವೇರಾ ಅವರ ಮಕ್ಕಳಾದ ಕೆಲಿಸ್ಟಾ ಮತ್ತು ಕ್ಲಾರಿಶಾ, ಮೂವತ್ತಮುಡಿ ಆಲ್ವಿನ್ ಒಲಿವೇರಾ ಅವರ ಮಕ್ಕಳಾದ ಅನ್ಸಿಟಾ ಮತ್ತು ಅಲ್ವಿಟಾ, ಬಗ್ವಾಡಿ ಕ್ರಾಸ್ ವಿನೋದ ಡಯಾಸ್ ಅವರ ಪುತ್ರ ಡೆಲ್ವಿನ್, ಹೆಮ್ಮಾಡಿಯ ವಿನೋದ್ ಲೋಬೊ ಅವರ ಪುತ್ರ ರೊಯ್‌ಸ್ಟನ್ ಮೃತಪಟ್ಟಿದ್ದರು. ಓಮ್ನಿಯಲ್ಲಿದ್ದ ಉಳಿದ ಹತ್ತು ಮಂದಿ ಮಕ್ಕಳು ಹಾಗೂ ಓರ್ವ ಶಿಕ್ಷಕ, ಚಾಲಕ ಗಾಯಗೊಂಡಿದ್ದರು.

Exit mobile version