Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶಾಲಾ ವಾಹನಗಳ ತಪಾಸಣೆ, ನಿಯಮ ಮೀರಿದ್ದಕ್ಕೆ ಕಾನೂನು ಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಳವಾರ ಭೀಕರ ಅಪಘಾತದ ನಂತರ ಎಚ್ಚೆತ್ತ ಪೊಲೀಸರು ಬುಧವಾರ ಶಾಲಾ ವಾಹನಗಳ ತಪಾಸಣೆ ನಡೆಸಿದರು. ಹೆದ್ದಾರಿಯಲ್ಲಿ ವಿದ್ಯಾರ್ಥಿUಳ ಸಾಗಿಸುವ ವಾಹನಗಳ ಚೆಕ್ಕ್ ಮಾಡಿ, ನಿಯಮಕ್ಕೂ ಮೀರಿದ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಿ, ಕೇಸ್ ಹಾಕಲಾಗಿದೆ. ಎಲ್ಲಾ ಖಾಸಗಿ ಶಾಲಾ ವಾಹನ ಚೆಕ್ಕ್ ಮಾಡಲು ಸೂಚಿಸಿದ್ದು, ನಿಯಮ ಬಾಹೀರವಾಗಿ ಮಕ್ಕಳ ಸಾಗಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲಾ ಕಡೆ ಶಾಲಾ ವಾಹನ ಚೆಕ್ ಮಾಡುವಂತೆ ಸೂಚಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಶಾಲೆ ಬಿಟ್ಟನಂತರ ವಾಹನ ಚೆಕ್ ಮಾಡಲಾಗುತ್ತದೆ ಎಂದು ಕುಂದಾಪುರ ಡಿಎಸ್ಪಿ ಎಂ.ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.

Exit mobile version