Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಗಾಯಗೊಂಡಿದ್ದ ಮಕ್ಕಳ ಆರೋಗ್ಯ ಚೇತರಿಕೆ. ಮೂವರು ಅಸ್ಪತ್ರೆಯಿಂದ ಡಿಸ್ಚಾರ್ಜ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖಾಸಗಿ ಬಸ್ ಮತ್ತು ಶಾಲಾ ಮಕ್ಕಳ ಸಾಗಿಸುತ್ತಿದ್ದ ಓಮ್ನಿ ನಡುವೆ ತ್ರಾಸಿಯ ಮೋವಾಡಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳು ಬುಧವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವರು ಇನ್ನೂ ಆಸ್ಪತ್ರೆಯಲ್ಲಿದ್ದು, ಗಾಯಗೊಂಡಿದ್ದ ಇನ್ನೋರ್ವ ಯುವತಿ ಸುಪ್ರಿತಾ ಸಂಜೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಓಮಿನಿ ಚಾಲಕನ ಪತ್ನಿ ಫಿಲೋಮಿನಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಡಾನ್‌ಬಾಸ್ಕೋ ಶಾಲೆ ಎಲ್‌ಕೆಜಿ ವಿದ್ಯಾರ್ಥಿ ರೆನ್ವಿಲ್, ಇಬ್ಬರು ೧೦ನೇ ತರಗತಿ ವಿದ್ಯಾರ್ಥಿಗಳಾದ ಮರಿಷಾ ಮತ್ತು ವೀರಾ ಮನೆಗೆ ಮರಳಿದವರು.

Exit mobile version