Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮಲೇರಿಯಾ ಜಾಗೃತಿ ಜಾಥಾ ಮತ್ತು ಸ್ವಚ್ಚತಾ ಸಪ್ತಾಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ ಕುಂದಾಪುರ, ರೊಟರಿ ಕ್ಲಬ್ ಕುಂದಾಪುರ ದಕ್ಷಿಣ ಇವುಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಮಲೇರಿಯಾ ಮಾಸಾಚರಣೆ ಮತ್ತು ಸ್ವಚ್ಚತಾ ಸಪ್ತಾಹ ಇಲ್ಲಿನ ಶಾಸ್ತ್ರಿ ವೃತ್ತದಲ್ಲಿರುವ ಶಾಲೋಮ್ ಸಭಾಗಂಣದಲ್ಲಿ ನಡೆಯಿತು.

ಸಭೆಗೂ ಮುನ್ನ ನಡೆದ ಜಾಗೃತಿ ಜಾಥಾವನ್ನು ಪುರಸಭಾಧ್ಯಕ್ಷೆ ವಸಂತಿ ಮೋಹನ ಸಾರಂಗ್ ಹಸಿರು ಬಾವುಟ ಪ್ರದರ್ಶಿಸಿ ಚಾಲನೆ ನೀಡಿದರು. ಜಾಥಾವು ಶಾಸ್ತ್ರೀ ಸರ್ಕಲ್‌ನಿಂದ ಶಾಲೋಮ್ ಸಭಾಂಗಣದವರೆಗೆ ಸಾಗಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರೋಹಿಣಿ, ಸೊಳ್ಳೆಗಳ ಉತ್ಪತ್ತಿಯಾಗುವುದು ಮಳೆಗಾಲದ ಆರಂಭದಲ್ಲಿ ಈ ಸಂದರ್ಭ ಎಲ್ಲಿಯೂ ನೀರು ನಿಲ್ಲದಂತೆ ಜಾಗೃತೆವಹಿಸಬೇಕು, ಕಳೆದೆರಡು ವರ್ಷಗಳಿಂದ ಮಲೇರಿಯಾ ತೊಂದರೆ ಕುಂದಾಪುರದಲ್ಲಿ ಕಡಿಮೇ ಇದೆ ಎಕೆಂದರೆ ಕಟ್ಟಡ ಕಾಮಗಾರಿಗಳು ನಡೆಯುತ್ತಿರುವುದು ಕಡಿಮೇಯಾಗಿದೆ. ಕಳೆದೆರಡು ವರ್ಷಗಳ ಹಿಂದೆ ಕುಂದಾಪುರ ಕಾರ್ಕಳದಲ್ಲಿ ಅಧಿಕ ಪ್ರಮಾಣದಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು ಎಂದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಇಂದಿನ ಮಕ್ಕಳು ಬೀದಿ ಬದಿಯ ತಿನಿಸುಗಳನ್ನು ಸೇವನೆ ಮಾಡಿ ಆರೋಗ್ಯ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಬೀದಿ ಬದಿಯ ಆಹಾರಗಳು ತಿನ್ನಲು ರುಚಿ ನೀಡಿದರೂ ಆ ನಂತರ ಆರೋಗ್ಯಕ್ಕೆ ಮಾಡುವ ಹಾನಿ ಭಯಾನಕವಾಗಿದೆ. ಈ ಬಗ್ಗೆ ಮಕ್ಕಳು ಎಚ್ಚೆತ್ತುಕೊಳ್ಳಬೇಕು ಎಂದರು. ಹೋಟೇಲ್‌ಗಳು ಶುಚಿತ್ವ ಕಾಪಾಡುವಲ್ಲಿ ನಿರ್ಲರ್ಕ್ಯವಹಿಸುತ್ತಿದ್ದು. ಆರೋಗ್ಯ ಇಲಾಖೆ ಆಗಾಗ ಹೊಟೆಲ್‌ಗಳಿಗೆ ದಾಳಿ ನಡೆಸಿ, ತಪ್ಪಿತ್ತಸ್ಥರ ವಿರುದ್ದ ಕ್ರಮ ಕೈಗೊಂಡಾಗ ಮಾತ್ರ ಶುಚಿತ್ವ ಆರೋಗ್ಯಕರ ಆಹಾರ ಸಾರ್ವಜನಿಕರಿಗೆ ಲಭ್ಯವಾಗುತ್ತದೆ ಈ ಕುರಿತು ಗಮನಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ರೋಹಿಣಿಯವರಿಗೆ ರಾಜೇಶ್ ಕಾವೇರಿ ಮನವಿ ಮಾಡಿದರು.

ಪುರಸಭಾಧ್ಯಕ್ಷೆ ವಸಂತಿ ಮೋಹನ ಸಾರಂಗ್ ವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಪುಷ್ಪಾ ಶೇಟ್, ಗುಣರತ್ನ, ಶಕುಂತಳಾ ಗುಲ್ವಾಡಿ, ಸಿಸಿಲಿಯಾ ಕೋಟ್ಯಾನ್, ರೋಟರಿ ನಿಕಟಪೂರ್ವ ಅಧ್ಯಕ್ಷ ಕೆಪಿ ಭಟ್, ಉದ್ಯಮಿ ಅಬ್ದುಲ್ ಬಶೀರ್, ಸದಾನಂದ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು,ತಾಲೂಕು ಆರೋಗ್ಯಾಧಿಕಾರಿ ಡಾ|ಚಿದಾನಂದ ಸಂಜು ಪ್ರಾಸ್ತಾವಿಕ ಮಾತನ್ನಾಡಿದರು. ಅಜೆಯ್ ಭಂಢಾರ್ಕರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳಿಗೆ ಡಾ|ಪ್ರೇಮಾನಂದ ಮಲೇರಿಯಾ ಕಾಯಿಲೆಯ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೆ ಸ್ಥಳೀಯ ಕಾಲೇಜಿನ ಸುಮಾರು ೨೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version