Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಯುವ ಜಾಗೃತಿ ವೇದಿಕೆಯಿಂದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯುವ ಜಾಗೃತಿ ವೇದಿಕೆ ಮತ್ತು ರಕ್ಷಾ ರೂರಲ್ ಡೆವೆಲಪ್‌ಮೆಂಟ್ ಟ್ರೈನಿಂಗ್ ಸೊಸೈಟಿ ಕುಂದಾಪುರದ ವತಿಯಿಂದ ಉಡುಪಿ ಕಾಲೇಜೊಂದರಲ್ಲಿ ಪ್ರಥಮ ಬಿಕಾಂ ಓದುತ್ತಿರುವ ಬೈಂದೂರಿನ ಶ್ಯಾಮಿನಕೊಡ್ಲುವಿನ ವಿದ್ಯಾರ್ಥಿನಿ ಜ್ಯೋತಿ ದೇವಾಡಿಗ ಅವರ ಕಾಲೇಜು ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಯಿತು.

ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿನಿಯ ವಸತಿ ನಿಲಯದ ವೆಚ್ಚವನ್ನು ಭರಿಸಲು ನಿರ್ಧರಿಸಿ, ಒಂದು ವರ್ಷಕ್ಕೆ ತಗಲುವ ವೆಚ್ಚವನ್ನು ಅಂದಾಜಿಸಿ ಚೆಕ್ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಯುವ ಜಾಗೃತಿ ವೇದಿಕೆ ಕುಂದಾಪುರ ಅಧ್ಯಕ್ಷ ರಮೇಶ್, ಉದ್ಯಮಿ ಕೆ ಆರ್ ನಾಯಕ್, ಬೈಂದೂರು ದೇವಾಡಿಗರ ಒಕ್ಕೂಟದ ಸಲಹಾ ಸಮಿತಿಯ ಸದಸ್ಯ ಎಸ್.ಡಿ ಹೇನಬೇರು, ಜೊತೆ ಕಾರ್ಯದರ್ಶಿ ಚಂದ್ರ ದೇವಾಡಿಗ, ಸಂಘಟನಾ ಕಾರ್ಯದರ್ಶಿ ರಘುರಾಮ್ ಬೈಂದೂರು ಹಾಗೂ ಮಹಾಲಿಂಗ ದೇವಾಡಿಗ ಉಪಸ್ಥಿತರಿದ್ದರು. /ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version