Kundapra.com ಕುಂದಾಪ್ರ ಡಾಟ್ ಕಾಂ

ಸತತ ಮಳೆಯಿಂದ ತೀವ್ರ ಕಡಲ್ಕೊರೆತ : ಆತಂಕದಲ್ಲಿ ನಿವಾಸಿಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಎರಡು ಮೂರು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಂಗೊಳ್ಳಿ, ಮರವಂತೆ, ಕೊಡೇರಿ, ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು, ಶಿರೂರು ಸೇರಿದಂತೆ ಮುಂತಾದ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ, ಕೆಲವಡೆ ತಾತ್ಕಲಿಕವಾಗಿ ಅಳವಡಿಸಿದ ಕಲ್ಲು ಸಮುದ್ರದ ಅಲೆಗೆ ಕೊಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿದೆ, ಇದರಿಂದಾಗಿ ಸಮುದ್ರ ದಡದಲ್ಲಿ ಕೊರೆತ ಉಂಟಾಗಿದ್ದು, ಇಲ್ಲಿನ ಹತ್ತಾರು ತೆಂಗಿನಮರ ಸಮುದ್ರ ಪಾಲಾಗುವ ಆತಂಕ ಎದುರಾಗಿದೆ. ತೀವ್ರ ಕಡಲ್ಕೊರೆತ ಉಂಟಾದ ಹೊಸಹಿತ್ಲು ಭಾಗಕ್ಕೆ ಬೈಂದೂರು ವಿಶೇಷ ತಹಶೀಲ್ದಾರ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

news Kadlkoreta 1

Exit mobile version