Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ, ಗಂಗೊಳ್ಳಿ, ಶಿರೂರಿನಲ್ಲಿ ರಮ್ಜಾನ್ ಪೂರ್ವಭಾವಿ ಶಾಂತಿಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಮ್ಜಾನ್ ಹಬ್ಬ ಸಮೀಪಿಸುತ್ತಿದ್ದು ಧಾರ್ಮಿಕ ಸೂಕ್ಷ್ಮ ಪ್ರದೇಶದಲ್ಲಿ ಕೋಮು ಸೌಹಾರ್ದ ಕಾಪಿಡುವ ನೆಲೆಯಲ್ಲಿ ಕುಂದಾಪುರ ಪೊಲೀಸರು ಅಲ್ಲಲ್ಲಿ ಶಾಂತಿಸಭೆ ನಡೆಸಿ ಸರ್ವಧರ್ವದ ಮುಖಂಡರಿಗೆ ಮಾರ್ಗದರ್ಶವನ್ನಿತ್ತು, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುವಂತೆ ಕೋರಿಕೊಂಡರು.

ಕುಂದಾಪುರದ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮಾತನಾಡಿ ಕುಂದಾಪುರ ಮತ್ತು ಬೈಂದೂರಿನಲ್ಲಿ ೫೨ ಮಸೀದಿಗಳಿವೆ. ರಮ್ಜಾನ್ ಹಬ್ಬದಂದು ೫ ಮೆರವಣಿಗೆ ನಡೆಯಲಿದೆ. ಬಾನರ್, ಮೈಕ್ ಪರವಾನಗಿ ಮುಂಚಿತವಾಗಿ ತೆಗೆದುಕೊಳ್ಳಬೇಕು. ಎಲ್ಲಾ ಧರ್ಮದವರು ಸೇರಿ ಆಚರಿಸುವ ಹಬ್ಬವಾಗಿದ್ದು, ಕಳೆದ ಮೂರು ವರ್ಷಗದಿಂದ ರಮಜಾನ್ ಹಬ್ಬದ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ವರ್ಷವೂ ಶಾಂತಿಯುತವಾಗಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ರಾಷ್ರ್ಟೀಯ ಹೆದ್ದಾರಿಯಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ, ಅಪರಿಚಿತ ವ್ಯಕ್ತಿಗಳ ತಪಾಸಣೆ ಹಾಗೂ ಜಾನುವಾರು ಕಳ್ಳಸಾಗಣೆ ತಡೆಯಲಾಗುತ್ತದೆ. ಈಗಾಗಲೇ ಮಾರ್ಗಸೂಚಿಯನ್ನು ಇಲಾಖಾ ಅಧಿಕಾರಿಗಳಿಗೆ ನೀಡಲಾಗಿದೆ ಎಂದರು. ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ. ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕರಾದ ದಿವಾಕರ್ ಹಾಗೂ ಇಲಾಖೆ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗಂಗೊಳ್ಳಿ: ಗಂಗೊಳ್ಳಿ ಪೊಲೀಸ್ ಹೊರಠಾಣೆಯಲ್ಲಿ ನಡೆದ ಶಾಂತಿಸಭೆಯನ್ನುದ್ದೇಶಿಸಿ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾತನಾಡಿ ರಮ್ಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಧಾರ್ಮಿಕ ಸೌಹಾರ್ದತೆಯನ್ನು ಕಾಯ್ದುಕೊಳ್ಳು ಎಂದು ಸಲಹೆಯಿತ್ತರು.

ಗಂಗೊಳ್ಳಿ ಗ್ರಾಪಂ ಸದಸ್ಯ ಯೂನುಸ್ ಸಾಹೇಬ್, ವೃತ್ತ ನಿರೀಕ್ಷಕ ಸುದರ್ಶನ್, ಠಾಣಾಧಿಕಾರಿ ಸುಬ್ಬಣ್ಣ ಮೊದಲಾದವರು ಉಪಸ್ಥಿತರಿದ್ದರು. ಗಂಗೊಳ್ಳಿಯ ಸರ್ವಧರ್ಮದ ಮುಖಂಡರು ಭಾಗವಹಿಸಿದ್ದರು.

ಶಿರೂರು: ಶಿರೂರು ಗ್ರಾಪಂ ಸಭಾಭವನದಲ್ಲಿ ನಡೆದ ಶಾಂತಿಸಭೆಯನ್ನುದ್ದೇಶಿಸಿ ಬೈಂದೂರು ವೃತ್ತ ನೀರೀಕ್ಷಕ ಸುದರ್ಶನ್ ಮುದ್ರಾಡಿ ಮಾತನಾಡಿ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಜಾಗೃತಿ ವಹಿಸುವಂತೆ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಸುರೇಶ ಬಟ್ವಾಡಿ ಉಪಸ್ಥಿತರಿದ್ದರು. ತಾಪಂ ಸದಸ್ಯರಾದ ಮೌಲಾನಾ ದಸ್ತಗೀರ್ ಸಾಹೇಬ್, ಪುಷ್ಪರಾಜ್ ಶೆಟ್ಟಿ, ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಬೈಂದೂರು ಆರಕ್ಷಕ ಉಪನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ ಸ್ವಾಗತಿಸಿ, ವಂದಿಸಿದರು. /ಕುಂದಾಪ್ರ ಡಾಟ್ ಕಾಂ ಸುದ್ದಿ./

 

????????????????????????????????????
Exit mobile version