Kundapra.com ಕುಂದಾಪ್ರ ಡಾಟ್ ಕಾಂ

ಗದ್ದಲದ ಗೂಡಾಯಿತು ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ಪುರಸಭೆ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಆರೋಪ ಪ್ರತ್ಯಾರೋಪ, ಗೌಜ ಗಲಾಟೆಯಲ್ಲಿ ಕಳೆದು ಹೋಯಿತು. ಮಾತಿನ ಚಕಮಕಿಯಲ್ಲಿ ಯಾರು ಏನು ಹೇಳುತ್ತಿದ್ದಾರೆ ಎನ್ನೋದು ತಿಳಿಯದಾಯ್ತು. ಅಂಡರ್ ಗ್ರೌಂಡ್ ಡ್ರೈನೇಜ್ ಸಿಷ್ಟಮ್ ಬಗ್ಗೆ ಸ್ವಲ್ಪ ಹೊತ್ತು ಅರ್ಥಪೂರ್ಣ ಚರ್ಚೆ ನಡೆದಿದ್ದು, ಬಿಟ್ಟರೆ, ಹತ್ತಾರು ಸಮಸ್ಯೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿದ್ದ ಸ್ಥಳ ವ್ಯಥಾ ಆರೋಪ ಪ್ರತ್ಯಾರೋಪದಲ್ಲಿ ಕಳದುಹೋಯಿತು.

ಕುಂದಾಪುರ ಪುರಸಭೆಯಲ್ಲಿ ಆರಂಭವಾದ ಅಂಡರ್ ಗ್ರೈಂಡ್ ಡ್ರೈನೇಜ್ ಸಿಸ್ಟಮ್ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಿತು. ಯುಜಿಡಿ ಯೋಜನೆಗೆ ಬೃಹತ್ ಅನುದಾನ ನೀಡಲಾಗಿದ್ದು, ಕಳಪೆ ಕಾಮಗಾರಿ ಕುಂದಾಪುರ ಪುರಸಭೆಗೆ ಕೆಟ್ಟ ಹೆಸರು ತರುತ್ತಿದೆ. ಇದರಿಂದ ಪುರಸಭೆ ಸದಸ್ಯರ ಇಮೇಜ್ ಹಾಳಾಗಲಿದ್ದು, ಕಾಮಗಾರ ಬಿಡಬೇಕಾಗುತ್ತದೆ ಎಂದು ರಾಜೇಶ್ ಕಾವೇರಿ ಅಭಿಪ್ರಾಯಪಟ್ಟರು.

ಯುಪಿಬಿ ಯೋಜನೆ ನಿರಾಕರಿಸಿದರೆ ಮತ್ತೆ ಯೋಜನೆ ಸಿಗೋದು ಕಷ್ಟ. ಯುಡಿಜಿ ಕಳಪೆ ಕಾಮಗಾರಿ ಮಾಡದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡುವ ಜೊತೆ ಸಭೆ ನಡೆಸಿ, ಅವರ ಅಭಿಪ್ರಾಯ ತಿಳಿಯಬೇಕು. ಯುಡಿಜಿ ಯೋಜನೆಯಿಂದ ಹಾಳಾದ ರಸ್ತೆಗಳನ್ನು ಸಮಯ ಮಿತಿಯಲ್ಲಿ ಸರಿಮಾಡುವಂತೆ ತಾಕೀತ ಮಾಡುವಂತೆ ಸತೀಶ್ ಶೆಟ್ಟಿ, ಮೋಹನ್‌ದಾಸ್ ಶೆಣೈ, ಗುಣರತ್ನ ಮಾಜಿ ಅಧ್ಯಕ್ಷೆ ಕಲಾವತಿ ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿ ಟೆಂಡರ್ ಕೊಟೇಶನ್ ಪುರಸಭೆ ಅಧ್ಯಕ್ಷರ ಗಮನಕ್ಕೆ ತಾರದೆ ಓಪನ್ ಮಾಡುತ್ತಿದ್ದಾರೆ. ಪುರಸಭೆ ಅಧ್ಯಕ್ಷರ ಗಮನಕ್ಕೂ ತಾರದೆ ಕೆಲ ಸದಸ್ಯರು ಅನುದಾನ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಆನುದಾನ ಫಿಕ್ಸ್ ಮಾಡೋದು ಮುಖ್ಯಾಧಿಕಾರಿಗಳಾ? ಯಾವುದೂ ಅಧ್ಯಕ್ಷರ ಗಮನಕ್ಕೆ ತಾರದೆ ಅವಮಾನಿಸಲಾಗುತ್ತದೆ.

ರಾಜಕೀಯ ಮಾಡೋದಕ್ಕೆ ಜನಪ್ರತಿನಿಧಿಗಳಿದ್ದಾರೆ. ಆಧಿಕಾರಿಗಳು ರಾಜಕೀಯ ಮಾಡೋದು ಬೇಡ. ಟೆಂಡರ್, ಅನುದಾನ ಹಂಚಿಕೆ ಎಲ್ಲಾ ವಿಷಯ ಅಧ್ಯಕ್ಷರ ಗಮನಕ್ಕೆ ತರಬೇಕು. ಆಡಳಿತ ಮಂಡಳಿ ಓವರ್ ಟೇಕ್ ಮಾಡೋದು ಬೇಡ. ಕುಂದಾಪುರ ನಮ್ಮೂರು. ನೀವು ಇಂದು ಇಲ್ಲಿರುತ್ತೀರಿ, ನಾಳೆ ಮತ್ತೆಲ್ಲಿಗೋ ವರ್ಗವಾಗಿ ಹೋಗಿತ್ತೀರಿ. ಅಧ್ಯಕ್ಷರ ಗಮನಕ್ಕೆ ತಂದು ಅಧಿಕಾರಿಗಳು ಕೆಲಸ ಮಾಡುವಂತೆ ನಿರ್ಣಯ ಮಾಡುವಂತೆ ಆಡಳಿತ ಪಕ್ಷದ ಸದಸ್ಯ ರವಿರಾಜ್ ಖಾರ್ವಿ ಒತ್ತಾಯಿಸಿದ್ದು, ಸಭೆಯಲ್ಲಿ ಮಾತಿನ ಭರಾಟೆಗೆ ನಾಂದಿ ಆಯಿತು.

ರವಿರಾಜ್ ಖಾರ್ವಿ ನೇರವಾಗಿ ಅಧಿಕಾರಿಗಳ ಗುರಿಮಾಡಿದರೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸದಸ್ಯರು ದಾಖಲೆ ಸಮೇತ ಆರೋಪ ಮಾಡಬೇಕು. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಸಮರ್ಥನೆ ಮಾಡಿದರು.

ರವಿರಾಜ್ ಖಾರ್ವಿ ಆರೋಪಕ್ಕೆ ಪೂರಕವಾಗಿ ವಿಠಲ ಕುಂದರ್ ಬೇಕೆಂತಲೇ ಅಧ್ಯಕ್ಷರನ್ನು ಅವಮಾನಿಸುವ ಸಲುವಾಗಿ ಕೆಲ ಸದಸ್ಯರು ಹಾಗೆ ಮಾಡುತ್ತಿದ್ದಾರೆ ಎಂದು ಅರೋಪಿಸಿದರೆ, ಉಪಾಧ್ಯಕ್ಷ ರಾಜೇಶ್ ಕಾವೇರಿ ಮುಖ್ಯಾಧಿಕಾರಿ ಕಚೇರಿಯಲ್ಲಿ ನಾಲ್ಕು ಸದಸ್ಯರು ಠಿಕಾಣಿ ಹೂಡುತ್ತಿದ್ದು, ಬೇರೆಯವರಿಗೆ ಅವಕಾಶವೇ ಸಿಗದಂತೆ ಮಾಡಿದ್ದಾರೆ ಎಂದರು. ಇದಕ್ಕೆ ತಿರುಗೇಟು ನೀಡಿದ ಚಂದ್ರಶೇಖರ ಖಾರ್ವಿ ಅಧ್ಯಕ್ಷರ ಛೇಂಬರಿನಲ್ಲಿ ಉಪಾಧ್ಯಕ್ಷರಿಗೇನು ಕೆಲಸ ಎಂದು ಕೊಚಾಯಿಸಿದರು. ಉಪಾಧ್ಯಕ್ಷರಿಗೆ ವ್ಯವಸ್ಥಿತ ಛೇಂಬರ್ ಮಾಡಿಕೊಟ್ಟರೆ ಅಲ್ಲಿ ಕೂರುತ್ತೇನೆ ಎಂದು ಉಪಾಧ್ಯಕ್ಷರು ಸಮಜಾಯಸಿ ನೀಡಿದರು.

ಈತನ್ಮಧ್ಯೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್ ಮಾತನಾಡಿ, ಎಲ್ಲರೂ ಹುಟ್ಟುತ್ತಲೇ ಕಲಿತು ಬರೋದಿಲ್ಲ. ಕೆಲವೊಂದು ಮಾಹಿತಿಗಾಗಿ ಉಪಾಧ್ಯಕ್ಷರು ನನ್ನ ಛೇಂಬರಿನಲ್ಲಿ ಕೂತರೆ ತಪ್ಪೇನು ಎಂದು ಸಮರ್ಥಿಸಿಕೊಂಡರು. ಆರೋಪ, ಪ್ರಯತ್ಯಾರೋಪದಲ್ಲಿ ಸಭೆ ಗೊಂದಲದ ಗೂಡಾಯಿತು. ಕೈಕೈ ಮಿಲಾಸುವಷ್ಟರ ಮಟ್ಟಿಗೆ ನಡೆಯಿತು.
ರಸ್ತೆ ದುರಾಸ್ತಿಗಾಗಿ ಬಂದ ಪುರಸಭೆ ಜೆಸಿಬಿ ಮೂಲಕ ಸದಸ್ಯರು ತಮ್ಮ ಸ್ವಂತ ಕೆಲಸ ಮಾಡಿಸಿಕೊಂಡಿದ್ದಾರೆ. ಅದಕ್ಕೆ ನನ್ನ ಬಳಿ ಆಧಾರವಿದೆ ಎಂದು ರಾಜೇಶ್ ಕಾವೇರಿ ಹೇಳಿಕೆಯಿಂದ ಮತ್ತೆ ಸಭೆಯಲ್ಲಿ ಮಾತಿನ ಸಮರ ನಡೆಯಿತು. ವಿರೋಧ ಪಕ್ಷದ ಪ್ರಭಾಕರ ಕೋಡಿ, ಶಶಿಕಲಾ ಗಣೇಶ್ ಆಡಳಿತ ಪಕ್ಷದವರ ಆರೋಪ ಪ್ರತ್ಯಾರೋದಿಂದ ಸಭೆಯಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲ.

ಹಾಳಾದ ರಸ್ತೆ ದುರಾಸ್ತಿ ಮಾಡುವಂತೆ ಉದಯ ಮೆಂಡನ್ ಒತ್ತಾಯಿಸಿದ್ದು, ಎಲ್ಲೆಲ್ಲಿ ಅವಶ್ಯಕತೆಯಿದೆಯೋ ಅಲ್ಲಲ್ಲಿ ತುರ್ತು ದುರಸ್ತಿ ಮಾಡುವಂತೆ ನಿರ್ಧರಿಸಲಾಯಿತು.
ಪುರಸಭಾ ಅಧ್ಯಕ್ಷ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಮತ್ತು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Exit mobile version