Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾರ್ಥಿಗಳು ವಿಶ್ವ ಮಾರುಕಟ್ಟೆಯೊಂದಿಗೆ ಸ್ವರ್ಧಿಸಲು ಸಿದ್ಧರಾಗಬೇಕಿದೆ: ಆರ್. ವಿ. ದೇಶಪಾಂಡೆ

ಕುಂದಾಪುರ: ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಒಂದು ಸೂಪರ್ ಪವರ್ ರಾಷ್ಟ್ರವಾಗುವುದು ಖಚಿತ. ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸನ್ನು ಕಾಣಬೇಕಿದೆ. ಯೋಗ್ಯರಾದವರು ಮಾತ್ರ ಎಲ್ಲವನ್ನೂ ಎದುರಿಸಿ ಗೌರವಯುತವಾಗಿ ಬಾಳುತ್ತಾರೆ ಎಂದು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ಹೇಳಿದರು.

    ಅವರು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಥಾಕರ ದಿನಾಚರಣೆಯಂದು ಕಾಲೇಜಿನ ಸಂಸ್ಥಾಪಕ ಐ.ಎಂ. ಜಯರಾಮ ಶೆಟ್ಟಿ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಇಂದು ವಿಶ್ವ ಸಣ್ಣ ಹಳ್ಳಿಯಂತಾಗಿದೆ. ಕ್ಷಣಮಾತ್ರದಲ್ಲಿ ಜಗತ್ತಿನ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪುಸ್ತಕದ ಹುಳುವಾಗದೇ ಸಾಮಾನ್ಯ ಜ್ಞಾನವನ್ನೂ ಹೊಂದಿ ಭಾರತ ವಿಶ್ವ ಮಾರುಕಟ್ಟೆಯೊಂದಿಗೆ ನಡೆಯುತ್ತಿರುವ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಬೇಕಿದೆ. ಇದಕ್ಕೆ ಪೂರಕವಾಗಿ ನಾವು ಕೌಶಲಾಭಿವೃದ್ಧಿಗೆ ಅಗತ್ಯವಾದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಐ.ಎಂ.ಜೆ ಫೌಂಡೇಶನ್ ಲೋಕಾರ್ಪಣೆಗೊಳಿಸಿದರು.

       ಮಾಜಿ ಶಾಸಕ ಬಿ ಅಪ್ಪಣ್ಣ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿ ಜಿ. ಪಿ. ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಮಾಜಿ ಧರ್ಮದರ್ಶಿ ಸುಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಎಂಐಟಿನ ಛೇರ್ಮನ್ ಇನ್ಚಾರ್ಜ ಸಿದ್ಧಾರ್ಥ ಶೆಟ್ಟಿ, ಪ್ರಾಂಶುಪಾಲೆ ಡಾ. ಶುಭಾ ಪಿ. ಭಟ್ ವೇದಿಕೆಯಲ್ಲಿದ್ದರು. ಉಪನ್ಯಾಸಕ ಪ್ರದೀಪ್ ಸಂಸಾಡಿ ಸ್ವಾಗತಿಸಿದರು.

Exit mobile version